ಜರ್ಮನಿ: ನೂತನ ಸರಕಾರಕ್ಕಾಗಿ ಮೈತ್ರಿಕೂಟ ರಚನೆ ಕಸರತ್ತು ವಿಫಲ

Update: 2017-11-20 16:46 GMT

ಬರ್ಲಿನ್, ನ. 20: ಜರ್ಮನಿಯಲ್ಲಿ ನೂತನ ಸರಕಾರ ರಚನೆಯ ನಿಟ್ಟಿನಲ್ಲಿ ನಡೆದ ಮಹತ್ವದ ಮಾತುಕತೆಯೊಂದು ಸೋಮವಾರ ಮುರಿದುಬಿದ್ದಿದೆ. ಬಿಕ್ಕಟ್ಟು ನಿವಾರಣೆಯ ಹೊಸ ದಾರಿಗಳ ಅನ್ವೇಷಣೆಯಲ್ಲಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ತೊಡಗಿದ್ದು, ಮಧ್ಯಾಂತರ ಚುನಾವಣೆಯ ಸಾಧ್ಯತೆಯೂ ಎದುರಾಗಿದೆ.

ಪರ್ಯಾಯ ಮೈತ್ರಿಕೂಟವೊಂದು ನೂತನ ಸರಕಾರ ರಚಿಸುವ ಸಾಧ್ಯತೆಯೂ ದೂರವಾಗಿದ್ದು, ಮಧ್ಯಾಂತರ ಚುನಾವಣೆಯೇ ಅಂತಿಮ ಪರಿಹಾರವಾಗಬಹುದಾಗಿದೆ.

  ಮರ್ಕೆಲ್ ಸರಕಾರ ಅನುಸರಿಸಿಕೊಂಡು ಬರುತ್ತಿರುವ ಉದಾರವಾಗಿ ವಲಸಿಗ ನೀತಿಗೆ ಅವರ ಮೈತ್ರಿಕೂಟದಲ್ಲೇ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರ ಮೈತ್ರಿಕೂಟಕ್ಕೆ ಬಹುಮತ ಸಿಕ್ಕಿಲ್ಲ. ಹಾಗಾಗಿ, ಅವರು ಹೊಸ ಮೈತ್ರಿಕೂಟವೊಂದರ ರಚನೆಯಲ್ಲಿ ತೊಡಗಿದ್ದರು.

ಒಂದು ತಿಂಗಳಿಗೂ ಅಧಿಕ ಕಾಲದ ಸಂಧಾನದ ಬಳಿಕ, ಎಫ್‌ಡಿಪಿ ಪಕ್ಷದ ನಾಯಕ ಕ್ರಿಶ್ಚಿಯನ್ ಲಿಂಡ್‌ನರ್ ರವಿವಾರ ರಾತ್ರಿ ಮಾತುಕತೆಯಿಂದ ಹೊರನಡೆದಿದ್ದಾರೆ. ಮರ್ಕೆಲ್‌ರ ಕನ್ಸರ್ವೇಟಿವ್ ಮೈತ್ರಿಕೂಟ ಸಿಡಿಯು-ಸಿಎಸ್‌ಯು ಮತ್ತು ಪರಿಸರವಾಗಿ ‘ಗ್ರೀನ್ಸ್’ ಪಕ್ಷದೊಂದಿಗೆ ಸರಕಾರ ರಚಿಸಲು ‘ವಿಶ್ವಾಸದ ಕೊರತೆ’ಯಿದೆ ಎಂಬುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News