ಯಾವುದೇ ಮೂಲೆಗೆ ದಾಳಿ ಮಾಡಬಲ್ಲ ಕ್ಷಿಪಣಿ ಚೀನಾ ಸೇನೆಗೆ

Update: 2017-11-20 16:57 GMT

ಬೀಜಿಂಗ್, ನ. 20: ಜಗತ್ತಿನಲ್ಲಿರುವ ಯಾವುದೇ ಸ್ಥಳದ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ ಪರಮಾಣು ಅಸ್ತ್ರ ಹೊತ್ತೊಯ್ಯಬಲ್ಲ ಮುಂದಿನ ತಲೆಮಾರಿನ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ (ಐಸಿಬಿಎಂ)ಯನ್ನು ಚೀನಾ ತನ್ನ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಮುಂದಿನ ವರ್ಷದ ಆರಂಭದಲ್ಲಿ ಸೇರ್ಪಡೆಗೊಳಿಸುವ ನಿರೀಕ್ಷೆಯಿದೆ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ನೂತನ ಕ್ಷಿಪಣಿ ‘ಡೊಂಗ್‌ಫೆಂಗ್-41’ ‘ಮ್ಯಾಕ್ 10’ಗೂ (ಗಂಟೆಗೆ 12,348 ಕಿ.ಮೀ.) ಅಧಿಕ ವೇಗವನ್ನು ಹೊಂದಿದೆ. ಶತ್ರುವಿನ ಕ್ಷಿಪಣಿ ಎಚ್ಚರಿಕೆ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ವಂಚಿಸಿ ಮುನ್ನುಗ್ಗುವ ತಂತ್ರಜ್ಞಾನವನ್ನೂ ಅದು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News