ಮಾಜಿ ವಿಂಬಲ್ಡನ್ ಚಾಂಪಿಯನ್ ಜಾನಾ ನವೋತ್ನಾ ನಿಧನ

Update: 2017-11-20 18:12 GMT

ಪರಾಗ್ವೆ, ನ.20: ಮಾಜಿ ವಿಂಬಲ್ಡನ್ ಚಾಂಪಿಯನ್ ಜಾನಾ ನವೋತ್ನಾ(49 ವರ್ಷ) ಕ್ಯಾನ್ಸರ್ ಕಾಯಿಲೆಯಿಂದ ನಿಧನರಾಗಿದ್ದಾರೆ ಎಂದು ಡಬ್ಲುಟಿಎ ಸೋಮವಾರ ತಿಳಿಸಿದೆ.

   1998ರಲ್ಲಿ ಫ್ರಾನ್ಸ್ ನ ನಥಾಲಿ ತೌಝಿಯಟ್‌ರನ್ನು ಮಣಿಸುವ ಮೂಲಕ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದ ನವೋತ್ನಾ ಮತ್ತೆರಡು ಬಾರಿ ವಿಂಬಲ್ಡನ್ ಫೈನಲ್‌ನಲ್ಲಿ ಆಡಿದ್ದರು. 1993ರಲ್ಲಿ ಸ್ಟೆಫಿಗ್ರಾಫ್ ಹಾಗೂ 1997ರಲ್ಲಿ ಮಾರ್ಟಿನಾ ಹಿಂಗಿಸ್ ವಿರುದ್ಧ ಸೋತಿದ್ದರು. 1989 ಹಾಗೂ 1990ರಲ್ಲಿ ಸಹ ಆಟಗಾರ್ತಿ ಹೆಲೆನಾ ಸುಕೊವಾರೊಂದಿಗೆ, 1995ರಲ್ಲಿ ಅರಾಂಟ್ಸಾ ಸ್ಯಾಂಚೆಝ್, 1998ರಲ್ಲಿ ಹಿಂಗಿಸ್ ಜೊತೆಗೂಡಿ ನಾಲ್ಕು ಬಾರಿ ವಿಂಬಲ್ಡನ್ ಡಬಲ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದರು. ತಲೆಗೆ ವಿಶಿಷ್ಟವಾದ ಪಟ್ಟಿ ಧರಿಸಿ ಆಡುತ್ತಿದ್ದ ನವೋತ್ನಾ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಟೂರ್ನಮೆಂಟ್‌ಗಳಲ್ಲೂ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ.

ಅಕ್ಟೋಬರ್ 2, 1968ರಲ್ಲಿ ಜಯಿಸಿದ್ದ ನವೋತ್ನಾ 1987 ರಿಂದ 1999ರ ತನಕದ ವೃತ್ತಿಬದುಕಿನಲ್ಲಿ ಒಟ್ಟು 24 ಸಿಂಗಲ್ಸ್ ಟೂರ್ನಿಗಳು ಹಾಗೂ 76 ಡಬಲ್ಸ್ ಟೂರ್ನಿಗಳನ್ನು ಗೆದ್ದುಕೊಂಡಿದ್ದರು. 1988ರಲ್ಲಿ ಆಗಿನ ಝಕೊಸ್ಲೋವಾಕಿಯ ದೇಶದ ಪರ ಫೆಡ್‌ಕಪ್‌ನ್ನು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News