ಹಾಂಕಾಂಗ್ ಓಪನ್: ಭಾರತಕ್ಕೆ ಸಿಂಧು ಸಾರಥ್ಯ

Update: 2017-11-20 18:16 GMT

ಕೌಲೂನ್(ಹಾಂಕಾಂಗ್), ನ.20: ಭಾರತದ ಆಟಗಾರ್ತಿ ಪಿ.ವಿ.ಸಿಂಧು ಮಂಗಳವಾರ ಇಲ್ಲಿ ಆರಂಭವಾಗಲಿರುವ 400,000 ಯುಎಸ್ ಡಾಲರ್ ಬಹುಮಾನ ಮೊತ್ತದ ಹಾಂಕಾಂಗ್ ಓಪನ್ ಸೂಪರ್ ಸರಣಿಯಲ್ಲಿ ಭಾರತದ ಸಾರಥ್ಯ ವಹಿಸಲಿದ್ದಾರೆ. ಸಿಂಧು ಸತತ ಐದನೆ ಸೂಪರ್ ಸರಣಿ ಆಡಲು ಸಜ್ಜಾಗಿದ್ದಾರೆ. ನಿರಂತರ ಟೂರ್ನಿಗಳಿಂದ ಸಿಂಧು ಪ್ರದರ್ಶನ ಮೇಲೆ ಪರಿಣಾಮಬೀರಿದ್ದು,ಚೀನಾ ಓಪನ್‌ನಲ್ಲಿ ಚೀನಾದ ಗಾವೊ ಫಾಂಗ್‌ಜಿ ವಿರುದ್ಧ ಸೋತಿದ್ದರು. ಸಿಂಧು ಮೊದಲೆರಡು ಸುತ್ತಿನಲ್ಲಿ ಜಯ ಸಾಧಿಸಿದರೆ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ಅಕಾನ್ ಯಮಗುಚಿ ಅವರನ್ನು ಎದುರಿಸಲಿದ್ದಾರೆ. ಸೈನಾ ನೆಹ್ವಾಲ್ ಹಾಗೂ ಎಚ್‌ಎಸ್ ಪ್ರಣಯ್ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಈವರ್ಷ ಸತತ 4 ಸೂಪರ್ ಸರಣಿ ಜಯಿಸಿದ್ದ ವಿಶ್ವದ ನಂ.2ನೆ ಆಟಗಾರ ಶ್ರೀಕಾಂತ್ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ. ಚೀನಾ ಓಪನ್‌ನಿಂದ ಹೊರಗುಳಿದಿದ್ದ ಸಾಯಿ ಪ್ರಣೀತ್ ಹಾಗೂ ಕೆ.ಕಶ್ಯಪ್ ಈ ಟೂರ್ನಿಗೆ ವಾಪಸಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News