ಸೆನ್ಸಾರ್ ಪ್ರಮಾಣಪತ್ರ ನೀಡದೆ ಚಲನಚಿತ್ರ ನಿಷೇಧ ಅಸಾಧ್ಯ: ಪಹ್ಲಾಜ್ ನಿಹಲಾನಿ

Update: 2017-11-21 15:23 GMT

ಮುಂಬೈ, ನ. 21: ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗುವುದಕ್ಕಿಂತ ಮುನ್ನ ಚಲನಚಿತ್ರ ನಿಷೇಧಿಸಲು ಅಸಾಧ್ಯ ಎಂದು ಸೋಮವಾರ ಹೇಳುವ ಮೂಲಕ ಚಲನಚಿತ್ರ ಪ್ರಮಾಣೀಕರಣದ ಕೇಂದ್ರ ಮಂಡಳಿ (ಸಿಬಿಎಫ್‌ಸಿ)ಯ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪದ್ಮಾವತಿ ಚಲನಚಿತ್ರದ ಮೇಲೆ ವಿಧಿಸಿರುವ ನಿಷೇಧವನ್ನು ತಳ್ಳಿ ಹಾಕಿದ್ದಾರೆ.

  ಪ್ರಮಾಣಪತ್ರ ಲಭಿಸುವುದಕ್ಕಿಂತ ಮುನ್ನ ಚಲನಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ. ಪ್ರಮಾಣ ಪತ್ರ ಲಭಿಸಿದ ಬಳಿಕ, ಚಲನಚಿತ್ರದಿಂದ ರಾಜ್ಯದ ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟಾಗುತ್ತದೆ ಎಂಬ ಸಂಶಯ ಬಂದ ಬಳಿಕವಷ್ಟೇ ನಿಷೇಧ ಹೇರಬಹುದು. ಪ್ರಮಾಣ ಪತ್ರ ಲಭಿಸದ ಮುನ್ನ ರಾಜ್ಯವೊಂದು ಚಿತ್ರದ ದೃಶ್ಯಗಳಿಗೆ ಕತ್ತರಿ ಹಾಕುತ್ತೇವೆ, ನಿಷೇಧಿಸುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News