×
Ad

ದಲ್ವೀರ್ ಭಂಡಾರಿ ಐಸಿಜೆಗೆ ಮರುಆಯ್ಕೆ: ಭಾರತವನ್ನು ಅಭಿನಂದಿಸಿದ ರಷ್ಯಾ

Update: 2017-11-22 19:12 IST

ಹೊಸದಿಲ್ಲಿ, ನ.22: ಭಾರತೀಯ ಮೂಲದ ದಲ್ವೀರ್ ಭಂಡಾರಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಮರುಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ರಷ್ಯಾವು ಭಾರತವನ್ನು ಅಭಿನಂದಿಸಿದ್ದು ಇದು ಜಾಗತಿಕ ಸಮುದಾಯದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ಹೇಳಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ರಷ್ಯಾದ ಭಾರತೀಯ ರಾಯಭಾರಿ ನಿಕೊಲೆ ರಿಶಟೊವಿಚ್ ಕುಡಶೆವ್, ಜಾಗತಿಕ ಸಮುದಾಯವು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಭಾರತದ ಗೆಲುವು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಶಕ್ತಿಯನ್ನು ತುಂಬಿದೆ ಎಂದು ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಕೇಂದ್ರ ಗೃಹರಾಜ್ಯ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾದ ನಂತರ ವರದಿಗಾರರ ಜೊತೆ ಮಾತನಾಡುವ ವೇಳೆ ಕುಡಶೆವ್ ಈ ಮಾತುಗಳನ್ನಾಡಿದರು.

ಸೋಮವಾರದಂದು ಬ್ರಿಟನ್‌ನ ಅಭ್ಯರ್ಥಿ ಕ್ರಿಸ್ಟೊಫರ್ ಗ್ರೀನ್‌ವುಡ್ ತಮ್ಮ ನಾಮಪತ್ರವನ್ನು ವಾಪಸ್ ಪಡೆದ ನಂತರ ಯುಎನ್ ಭದ್ರತಾ ಮಂಡಳಿ ಮತ್ತು ಜನರಲ್ ಅಸೆಂಬ್ಲಿ ಭಾರತದ ಪರವಾಗಿ ಮತ ಚಲಾಯಿಸಿತ್ತು. ನ್ಯಾಯಾಧೀಶರಾದ ದಲ್ವೀರ್ ಭಂಡಾರಿ ಭದ್ರತಾ ಮಂಡಳಿಯ ಎಲ್ಲಾ 15 ಮತಗಳನ್ನು ಪಡೆಯಲು ಶಕ್ತರಾದರೆ ಯುಎನ್ ಜನರಲ್ ಅಸೆಂಬ್ಲಿಯಲ್ಲಿ 193 ಮತಗಳ ಪೈಕಿ 183 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು.

70ರ ಹರೆಯದ ಭಂಡಾರಿ ಮುಂದಿನ ಒಂಬತ್ತು ವರ್ಷಗಳ ಕಾಲ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News