×
Ad

ಭಾರತಕ್ಕೆ ಐದು ಪದಕಗಳ ನಿರೀಕ್ಷೆ

Update: 2017-11-22 23:27 IST

ಗುವಾಹಟಿ, ನ.22: ಇಲ್ಲಿ ನಡೆಯುತ್ತಿರುವ ವನಿತೆಯರ ಎಐಬಿಎ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಐವರು ಮಹಿಳಾ ಬಾಕ್ಸರ್‌ಗಳು ಪದಕದ ಭರವಸೆ ಮೂಡಿಸಿದ್ದಾರೆ.

51 ಕೆ.ಜಿ.ವಿಭಾಗದಲ್ಲಿ ಜ್ಯೋತಿ ಗುಲಿಯಾ,57 ಕೆ.ಜಿ.ವಿಭಾಗದಲ್ಲಿ ಶಶಿ ಚೋಪ್ರಾ, 64 ಕೆ.ಜಿ.ವಿಭಾಗದಲ್ಲಿ ಅಂಕುಶಿತಾ ಬೊರೊ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

+81 ಕೆ.ಜಿ.ವಿಭಾಗದಲ್ಲಿ ನೇಹಾ ಯಾದವ್ ಮತ್ತು 81 ಕೆ.ಜಿ.ವಿಭಾಗದಲ್ಲಿ ಅನುಪಮಾ ಅವರು ಕ್ವಾರ್ಟರ್ ಫೈನಲ್ ತಲುಪಿದ್ದಾರೆ. 75 ಕೆ.ಜಿ. ವಿಭಾಗದಲ್ಲಿ ನಿಹಾರಿಕಾ ಗೊನೆಲ್ಲಾ ಅವರು ಇಂಗ್ಲೆಂಡ್‌ನ ಜಾರ್ಜ್‌ಯಾ ಓ ಕಾನ್ನರ್ ವಿರುದ್ಧ ಸೋಲು ಅನುಭವಿಸಿದರು.

ಭಾರತ ಕಳೆದ ಆವೃತ್ತಿಯಲ್ಲಿ ಏಕೈಕ ಕಂಚು ಜಯಿಸಿತ್ತು. 2011ರ ಬಳಿಕ ಈ ತನಕ ಭಾರತಕ್ಕೆ ಒಂದು ಚಿನ್ನವನ್ನು ಜಯಿಸಲು ಸಾಧ್ಯವಾಗಲಿಲ್ಲ.

ಭಾರತ ಮೊದಲ ಬಾರಿ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಆಯೋಜಿಸಿದ್ದು, 38 ದೇಶಗಳ 150 ಬಾಕ್ಸರ್‌ಗಳು ಈ ಬಾರಿ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News