ರೈಲ್ವೆಯಿಂದ ಸ್ವರ್ಣ ನದಿ ಮಲಿನ: ಆರೋಪ

Update: 2017-11-23 14:26 GMT

ಉಡುಪಿ, ನ.23: ಪೆರಂಪಳ್ಳಿಯ ರೈಲ್ವೆ ಸೇತುವೆಯಲ್ಲಿರುವ ಹಳಿಯನ್ನು ಸ್ವಚ್ಛ ಮಾಡುವಾಗ ಮಲಮೂತ್ರ, ಆಯಿಲ್ ಮಿಶ್ರಿತ ಜಲ್ಲಿ ಪುಡಿಗಳನ್ನು ಸ್ವರ್ಣ ನದಿಗೆ ಎಸೆಯುವ ಮೂಲಕ ಮಲಿನ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರೈಲ್ವೆ ಇಲಾಖೆಯವರು ರೈಲ್ವೆ ಹಳಿಗೆ ಹೊಸ ಜೆಲ್ಲಿ ಹಾಕುವಾಗ ರೈಲ್ವೆ ಸೇತುವೆಯಲ್ಲಿದ್ದ ಮಲಮೂತ್ರ, ಆಯಿಲ್ ಮಿಶ್ರಣಗೊಂಡ ಜೆಲ್ಲಿ ಪುಡಿಯ ಮಣ್ಣನ್ನು ಉಡುಪಿಯ ಸ್ವರ್ಣ ನದಿಗೆ ಎಸೆಯುವುದು ಕಂಡುಬಂದಿದೆ. ಈ ರೀತಿ ಮಲಿನ ಮಣ್ಣನ್ನು ನದಿಗೆ ಎಸೆಯುವುದರಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೇ ಬೆಟ್ಟು, ಭಾಸ್ಕರ ದೇವಾಡಿಗ ಬಡಗಬೆಟ್ಟು, ಮೋಹನ ದಾಸ್ ನಾಯಕ್ ಪರ್ಕಳ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News