ಕುಂದಾಪುರ : ಮನೆ ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರು ಕಳವು

Update: 2017-11-23 16:16 GMT

ಕುಂದಾಪುರ, ನ.23: ಮನೆ ಕಳ್ಳತನಕ್ಕೆ ಬಂದ ಕಳ್ಳರಿಗೆ ಮನೆಯೊಳಗೆ ಏನು ಸಿಗದಿದ್ದಾಗ ಶೆಡ್‌ನಲ್ಲಿ ನಿಲ್ಲಿಸಿದ ಕಾರನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಹಂಗಳೂರು ಎಂಬಲ್ಲಿ ನ.22ರಂದು ರಾತ್ರಿ ವೇಳೆ ನಡೆದಿದೆ.

ಹಂಗಳೂರಿನ ಶರೀನ್ ಹೆಗ್ಡೆ ಎಂಬವರ ಮನೆಯ ಹಿಂದಿನ ಎರಡು ಬಾಗಿಲುಗಳ ಒಳಗಿನ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಎರಡು ರೂಮಿನಲ್ಲಿದ್ದ ಕಾಪಾಟು ಒಡೆದು ಬಟ್ಟೆ ಹಾಗೂ ಕಾಗದಪತ್ರಗಳನ್ನು ಚೆಲ್ಲಾಪಿಲ್ಲಿಗೊಳಿಸಿದರು. ಆದರೆ ಮನೆಯಲ್ಲಿ ಏನು ಸಿಗದಿದ್ದಾಗ ಕಳ್ಳರು ಕಪಾಟಿನಲ್ಲಿದ್ದ ಸ್ವೀಫ್ಟ್ ಡಿಸೈರ್ ಕಾರಿನ ಕೀಯನ್ನು ತೆಗೆದುಕೊಂಡು, ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

 ಕಾರಿನಲ್ಲಿ ಮೂಲ ವಿಮಾಪತ್ರ ಇದ್ದು, ಕಳವಾದ ಕಾರಿನ ಅಂದಾಜು ಮೌಲ್ಯ 3,00,000ರೂ. ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News