ಮಹಾರಾಷ್ಟ್ರ ಓಪನ್‌ಗೆ ಸಿಲಿಕ್, ಆ್ಯಂಡರ್ಸನ್

Update: 2017-11-24 18:16 GMT

ಹೊಸದಿಲ್ಲಿ, ನ.24: ಪುಣೆಯಲ್ಲಿ ಜ.1ರಿಂದ ಆರಂಭವಾಗಲಿರುವ ಚೊಚ್ಚಲ ಎಟಿಪಿ ಮಹಾರಾಷ್ಟ್ರ ಓಪನ್‌ನಲ್ಲಿ ವಿಶ್ವದ ನಂ.6ನೇ ಆಟಗಾರ ಮರಿನ್ ಸಿಲಿಕ್, 2017ರ ಯುಎಸ್ ಓಪನ್ ಫೈನಲಿಸ್ಟ್ ಕೆವಿನ್ ಆ್ಯಂಡರ್ಸನ್ ಹಾಗೂ ಇವೊ ಕಾರ್ಲೊವಿಕ್ ಭಾಗವಹಿಸಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಾಲ್ವರು ಅಗ್ರ-50 ಆಟಗಾರರು ಆಡಲಿದ್ದಾರೆ. ಅವರುಗಳೆಂದರೆ: ಕ್ರೊಯೇಷಿಯದ ಸಿಲಿಕ್(ವಿಶ್ವದ ನಂ.14), ದಕ್ಷಿಣ ಆಫ್ರಿಕದ ಆ್ಯಂಡರ್ಸನ್(ವಿಶ್ವದ ನಂ.14), ಸ್ಪೇನ್‌ನ ರಾಬರ್ಟೊ ಬೌಟಿಸ್ಟ ಅಗುಟ್(ವಿಶ್ವದ ನಂ.20) ಹಾಗೂ ಹಾಲೆಂಡ್‌ನ ರಾಬಿನ್ ಹಾಸ್ಸೆ (ವಿಶ್ವದ ನಂ.42).

ಕಳೆದ 21 ವರ್ಷಗಳಿಂದ ಚೆನ್ನೈನಲ್ಲಿ ಚೆನ್ನೈ ಓಪನ್ ಹೆಸರಿನಲ್ಲಿ ನಡೆಯುತ್ತಿದ್ದ ಎಟಿಪಿ ಟೆನಿಸ್ ಟೂರ್ನಿಯು ಈ ಬಾರಿ ಮಹಾರಾಷ್ಟ್ರಕ್ಕೆ ಸ್ಥಳಾಂತರವಾಗಿದೆ.

 ಚೊಚ್ಚಲ ಆವೃತ್ತಿಯ ಮಹಾರಾಷ್ಟ್ರ ಓಪನ್‌ನಲ್ಲಿ ಅಗ್ರ-100 ಆಟಗಾರರಾದ ಯೆನ್ ಸನ್ ಲು(ನಂ.71), ಜೆರೆಮಿ ಚಾರ್ಡಿ(ನಂ.77), ಪೀರ್-ಹ್ಯೂಸ್ ಹೆರ್ಬರ್ಟ್(ನಂ.81) ಹಾಗೂ ಗಿಲ್ಲೆಸ್ ಸಿಮೊನ್(ನಂ.91) ಭಾಗವಹಿಸಲಿದ್ದಾರೆ.

ಈ ವರ್ಷ ನಡೆದ ಚೆನ್ನೈ ಓಪನ್‌ನಲ್ಲಿ 2014ರ ಅಮೆರಿಕನ್ ಓಪನ್ ಚಾಂಪಿಯನ್ ಸಿಲಿಕ್ ಮೊದಲಸುತ್ತಿನಲ್ಲಿ ಸೋತಿದ್ದರು. 2009 ಹಾಗೂ 2010ರಲ್ಲಿ ಚೆನ್ನೈ ಓಪನ್ ಜಯಿಸಿದ್ದ ಸಿಲಿಕ್ ಈ ಬಾರಿ ಪ್ರಶಸ್ತಿ ಫೇವರಿಟ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News