ಪಾಕಿಸ್ತಾನದಲ್ಲಿ ಹಿಂಸಾಚಾರ ; 10 ಸಾವು

Update: 2017-11-26 05:23 GMT

ಇಸ್ಲಾಮಾಬಾದ್, ನ.26: ಚುನಾವಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಪ್ರತಿಜ್ಞಾ ವಿಧಿ ಬದಲಾಯಿಸಿರುವ  ಕಾನೂನು ಸಚಿವರ ಕ್ರಮವನ್ನು ಖಂಡಿಸಿ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಹಿಂಸಾಚಾರಕ್ಕೆ ತಿರುಗಿ, ಸಂಭವಿಸಿದ ಘರ್ಷಣೆಯಲ್ಲಿ 10 ಮಂದಿ ಬಲಿಯಾಗಿದ್ದಾರೆ. 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 
ಕಳೆದ ಮೂರು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಯತ್ನ ನಡೆಸಿದಾಗ ಈ ವೇಳೆ ಸಂಘರ್ಷ ಉಂಟಾಯಿತು ಎಂದು ತಿಳಿದು ಬಂದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸರಕಾರ ಇದೀಗ ಸೇನೆಯನ್ನು ನಿಯೋಜಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 
ಸರಕಾರ ನ್ಯೂಸ್ ಚಾನಲ್ ಮತ್ತು ಪ್ರಮುಖ ಸಾಮಾಜಿಕ ಜಾಲಾ ತಾಣಗಳನ್ನು ಬಂದ್ ಮಾಡಿದೆ.

ಪಾಕ್ ನ ಪ್ರಮುಖ ನಗರಗಳಾದ ಕರಾಚಿ, ಹೈದರಾಬಾದ್, ಲಾಹೋರ್, ಗುಜರಾತ್ , ಗುಜ್ರಾನ್ ವಾಲಾ , ಫೈಸಲಾಬಾದ್  ಮತ್ತು ಫೈಸಲಾಬಾದ್ ನಲ್ಲಿ ಅಶಾಂತಿಯ ವಾತಾವರಣ ಕಂಡು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News