ಅಲ್ಲಾಹನ ನಂತರ ನೀವೇ ನಮ್ಮ ಕೊನೆಯ ಭರವಸೆ ಎಂದ ಪಾಕಿಸ್ತಾನಿ ಪ್ರಜೆ
ಹೊಸದಿಲ್ಲಿ, ನ.26: “ಅಲ್ಲಾಹನ ನಂತರ ನೀವೇ ನಮ್ಮ ಕೊನೆಯ ಭರವಸೆ” ಎಂದು ಟ್ವೀಟ್ ಮಾಡಿ ವೈದ್ಯಕೀಯ ವೀಸಾ ಕೋರಿದ್ದ ಪಾಕಿಸ್ತಾನಿ ಪ್ರಜೆಯೊಬ್ಬನಿಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವೀಸಾ ಒದಗಿಸುವ ಭರವಸೆ ನೀಡಿದ್ದಾರೆ.
ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಬಯಸಿರುವ ನಾಲ್ವರು ಪಾಕಿಸ್ತಾನಿ ಪ್ರಜೆಗಳಿಗೆ ಸುಷ್ಮಾ ಸ್ವರಾಜ್ ವೀಸಾ ನೀಡುವುದಾಗಿಯೂ ಘೋಷಿಸಿದ್ದಾರೆ.
“”ಅಲ್ಲಾಹನ ನಂತರ ನೀವೆ ನಮ್ಮ ಕೊನೆಯ ಭರವಸೆ. ಮೆಡಿಕಲ್ ವೀಸಾ ನೀಡಲು ಇಸ್ಲಾಮಾಬಾದ್ ರಾಯಭಾರಿಗೆ ಅವಕಾಶ ನೀಡಿ” ಎಂದು ಶಹಝೈಬ್ ಇಕ್ಬಾಲ್ ಎಂಬ ಪಾಕಿಸ್ತಾನಿ ಪ್ರಜೆಯೊಬ್ಬ ಟ್ವೀಟ್ ಮಾಡಿದ್ದ. ಇಕ್ಬಾಲ್ ನ ಸಂಬಂಧಿಗೆ ಯಕೃತಿನ ಕಸಿ ಚಿಕಿತ್ಸೆ ಅಗತ್ಯವಾಗಿತ್ತು.
“ತಕ್ಷಣವೇ ನಾವು ನಿಮಗೆ ವೀಸಾ ನೀಡುತ್ತೇವೆ” ಎಂದು ಇಕ್ಬಾಲ್ ಅವರ ಮನವಿಗೆ ಉತ್ತರಿಸಿದ್ದಾರೆ. ಭಾರತವು ಮಾನವೀಯ ಸಮಸ್ಯೆಗಳನ್ನು ರಾಜಕೀಯಗೊಳಿಸುತ್ತಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದ ಮೂರುದಿನಗಳ ನಂತರ ಸುಷ್ಮಾ ಸ್ವರಾಜ್ ಈ ವೀಸಾ ನೀಡಲು ಸಮ್ಮತಿಸಿದ್ದಾರೆ.