×
Ad

ವರ್ಲ್ಡ್ ಯೂತ್ ಬಾಕ್ಸಿಂಗ್: ಭಾರತಕ್ಕೆ 5 ಚಿನ್ನ

Update: 2017-11-26 23:51 IST

ಗುವಾಹಟಿ, ನ.26: ಎಐಬಿಎ ವರ್ಲ್ಡ್ ವಿಮೆನ್ಸ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಐದು ಚಿನ್ನ ಬಾಚಿಕೊಂಡು ಅಗ್ರಸ್ಥಾನ ಗಳಿಸಿದೆ.

ಭಾರತ ಇದೇ ಮೊದಲ ಬಾರಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

48 ಕೆ.ಜಿ.ವಿಭಾಗದಲ್ಲಿ ನೀತು, 51 ಕೆ.ಜಿ.ವಿಭಾಗದಲ್ಲಿ ಜ್ಯೋತಿ ಗುಲಿಯಾ, 54 ಕೆ.ಜಿ.ವಿಭಾಗದಲ್ಲಿ ಸಾಕ್ಷಿ ಚೌಧುರಿ, 57 ಕೆ.ಜಿ.ವಿಭಾಗದಲ್ಲಿ ಶಶಿ ಚೋಪ್ರಾ ಮತ್ತು 64 ಕೆ.ಜಿ.ವಿಭಾಗದಲ್ಲಿ ಅಂಕುಶಿತಾ ಬೊರೊ ಚಿನ್ನ ಪಡೆದರು.

ಜ್ಯೋತಿ ಅವರು ಅರ್ಜೆಂಟೀನದಲ್ಲಿ ನಡೆಯಲಿರುವ ಯೂತ್ ಒಲಿಂಪಿಕ್ಸ್‌ಗೆ ತೇರ್ಗಡೆಯಾಗಿದ್ದಾರೆ.

ನೆಹಾ ಯಾದವ್ (+81 ಕೆ.ಜಿ) ಮತ್ತು ಅನುಪಮಾ (81 ಕೆ.ಜಿ) ಕಂಚು ಪಡೆದಿದ್ದಾರೆ.

2011ರ ಬಳಿಕ ಭಾರತ ಮೊದಲ ಬಾರಿ ಚಿನ್ನ ಗೆದ್ದುಕೊಂಡಿದೆ. 2011ರಲ್ಲಿ ಭಾರತದ ಸಾರ್ಜುಬಾಲಾ ದೇವಿ ಚಿನ್ನ ಪಡೆದಿದ್ದರು. ಕಳೆದ ಆವೃತ್ತಿಯಲ್ಲಿ ಭಾರತ ಕೇವಲ 1 ಕಂಚು ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News