×
Ad

ಗೆಲುವಿನ ಹಾದಿಯಲ್ಲಿ ಆಸ್ಟ್ರೇಲಿಯ

Update: 2017-11-26 23:59 IST

ಬ್ರಿಸ್ಬೇನ್, ನ.26: ಆ್ಯಶಸ್ ಸರಣಿಯ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ತಂಡ ಗೆಲುವಿನ ಹಾದಿಯಲ್ಲಿದೆ.

ಬ್ರಿಸ್ಬೇನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೆಸ್ಟ್‌ನ ನಾಲ್ಕನೇ ದಿನವಾಗಿರುವ ರವಿವಾರ ದಿನದಾಟ ನಿಂತಾಗ ಆಸ್ಟ್ರೇಲಿಯ ಎರಡನೇ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 114 ರನ್ ಗಳಿಸಿದ್ದು, ಗೆಲುವಿಗೆ ಇನ್ನು 56 ರನ್ ಗಳಿಸಬೇಕಾಗಿದೆ.

 ಆಸ್ಟ್ರೇಲಿಯ ತಂಡದ ಆರಂಭಿಕ ದಾಂಡಿಗರಾದ ಕ್ಯಾಮರೊನ್ ಬ್ಯಾಂಕ್ರಾಫ್ಟ್ 51 ರನ್(119ಎ, 5ಬೌ,1ಸಿ) ಮತ್ತು ಡೇವಿಡ್ ವಾರ್ನರ್ 60 ರನ್(86ಎ, 8ಬೌ) ಗಳಿಸಿ ಕ್ರೀಸ್‌ನಲ್ಲಿದ್ದಾರೆ.

 ಮೂರನೇ ದಿನದಾಟದಂತ್ಯಕ್ಕೆ ದ್ವಿತೀಯ ಇನಿಂಗ್ಸ್‌ನಲ್ಲಿ 16 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 33 ರನ್ ಗಳಿಸಿದ್ದ ಇಂಗ್ಲೆಂಡ್ ಇಂದು ಆಟ ಮುಂದುವರಿಸಿ 71.4 ಓವರ್‌ಗಳಲ್ಲಿ 195 ರನ್ ಗಳಿಸುವಷ್ಟರಲ್ಲಿ ಅಲೌಟಾಗಿದೆ. ಇದರೊಂದಿಗೆ ಆಸ್ಟ್ರೇಲಿಯ ತಂಡ ಎರಡನೇ ಇನಿಂಗ್ಸ್‌ನಲ್ಲಿ ಗೆಲುವಿಗೆ 170 ರನ್‌ಗಳ ಸವಾಲು ಪಡೆದಿತ್ತು.

ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಮಿಚೆಲ್ ಸ್ಟಾರ್ಕ್ (51ಕ್ಕೆ3), ಜೋಶ್ ಹೇಝಲ್‌ವುಡ್ (46ಕ್ಕೆ 3), ನಥಾನ್ ಲಿನ್ (67ಕ್ಕೆ 3) ಮತ್ತು ಪ್ಯಾಟ್ ಕಮಿನ್ಸ್ (23ಕ್ಕೆ1) ದಾಳಿಗೆ ಸಿಲುಕಿ ಬೇಗನೇ ಇನಿಂಗ್ಸ್ ಮುಗಿಸಿದೆ.

 ನಾಯಕ ಜೋ ರೂಟ್ ಮಾತ್ರ ಅರ್ಧಶತಕ(51) ಗಳಿಸಿದರು. ಮೋಯಿನ್ ಅಲಿ(40), ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋವ್ (42), ಮಾರ್ಕ್ ಸ್ಟೋನ್‌ಮ್ಯಾನ್(27), ಕ್ರಿಸ್ ವೋಕ್ಸ್(17) ಎರಡಂಕೆಯ ಸ್ಕೋರ್ ದಾಖಲಿಸಿದರು.

ಸ್ಟೋನ್‌ಮ್ಯಾನ್ ಔಟಾಗದೆ 19ರನ್ ಮತ್ತು ನಾಯಕ ಜೋ ರೂಟ್ ಔಟಾಗದೆ 5 ರನ್ ಗಳಿಸಿ ಬ್ಯಾಟಿಂಗ್‌ನ್ನು ನಾಲ್ಕನೆ ದಿನಕ್ಕೆ ಕಾಯ್ದಿರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್ ವಿವರ

ಇಂಗ್ಲೆಂಡ್ ಮೊದಲ ಇನಿಂಗ್ಸ್ 302

►ಆಸ್ಟ್ರೇಲಿಯ ಮೊದಲ ಇನಿಂಗ್ಸ್ 328

►ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 71.4 ಓವರ್‌ಗಳಲ್ಲಿ 195/10

  (ಜೋ ರೂಟ್ 51,ಮೋಯಿನ್ ಅಲಿ 40, ಜಾನಿ ಬೈರ್‌ಸ್ಟೋವ್ 42;ಜೋಶ್‌ಹೆೇಝಲ್‌ವುಡ್ 46ಕ್ಕೆ 3,ಮಿಚೆಲ್ ಸ್ಟಾರ್ಕ್ 51ಕ್ಕೆ3, ನಥಾನ್ ಲಿನ್ 67ಕ್ಕೆ 3)

►ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್ 34 ಓವರ್‌ಗಳಲ್ಲಿ 114 /0(ಕ್ಯಾಮರೊನ್ ಬ್ಯಾಂಕ್ರಾಫ್ಟ್ ಔಟಾಗದೆ 51 , ಡೇವಿಡ್ ವಾರ್ನರ್ ಔಟಾಗದೆ 60 )

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News