ಇರಾನ್, ಟರ್ಕಿ ಜೊತೆ ಕತರ್ ಒಪ್ಪಂದ

Update: 2017-11-27 16:15 GMT

ಟೆಹರಾನ್, ನ. 27: ತನ್ನ ನೆರೆಯ ಅರಬ್ ದೇಶಗಳಿಂದ ಆರ್ಥಿಕ ಮತ್ತು ರಾಜತಾಂತ್ರಿಕ ದಿಗ್ಬಂಧನೆಗೆ ಒಳಗಾಗಿರುವ ಕತರ್ ಜೊತೆ ಇರಾನ್ ಮತ್ತು ಟರ್ಕಿ ರವಿವಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ ಎಂದು ಇರಾನ್‌ನ ಸರಕಾರಿ ಟೆಲಿವಿಶನ್ ಹೇಳಿದೆ.

ಮೂರು ದೇಶಗಳ ನಡುವೆ ಸರಕುಗಳ ಹರಿವನ್ನು ನೋಡಿಕೊಳ್ಳುವ ಜಂಟಿ ಕ್ರಿಯಾ ಗುಂಪೊಂದರ ರಚನೆಗೆ ಈ ಒಪ್ಪಂದ ಅನುವು ಮಾಡಿಕೊಡುತ್ತದೆ ಎಂದು ಟೆಲಿವಿಶನ್‌ನ ವೆಬ್‌ಸೈಟ್ ತಿಳಿಸಿದೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಹಾಗೂ ಇರಾನ್‌ನೊಂದಿಗೆ ಸಂಬಂಧ ಬೆಳೆಸುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್‌ಗಳು ಜೂನ್‌ನಲ್ಲಿ ಕತರ್ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News