×
Ad

ಪಂಕಜ್ ಅಡ್ವಾಣಿ ಮುಡಿಗೆ ವಿಶ್ವ ಸ್ನೂಕರ್ ಕಿರೀಟ

Update: 2017-11-27 23:41 IST

ದೋಹಾ, ನ.27: ಐಬಿಎಸ್‌ಎಫ್ ವರ್ಲ್ಡ್‌ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪಂಕಜ್ ಅಡ್ವಾಣಿ ಇಂದು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಲ್ ಅರಬಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಂದು ನಡೆದ ಫೈನಲ್‌ನಲ್ಲಿ ಅಡ್ವಾಣಿ ಅವರು ಇರಾನ್‌ನ ಆಮಿರ್ ಸಾರ್ಕೊಶ್‌ರನ್ನು 8-2 ಫ್ರೇಮ್‌ಗಳಿಂದ ಮಣಿಸಿ ಪ್ರಶಸ್ತಿ ಯನ್ನು ಬಾಚಿಕೊಂಡರು. ಇದರೊಂದಿಗೆ ಅಡ್ವಾಣಿ 2017ರಲ್ಲಿ ಎರಡನೇ ಬಾರಿ ವರ್ಲ್ಡ್‌ಚಾಂಪಿಯನ್‌ಶಿಪ್ ಪ್ರಶಸ್ಸಿಯನ್ನ ತನ್ನದಾಗಿಸಿಕೊಂಡಿದ್ದಾರೆ. ಇದು ಅವರು ಜಯಿಸಿದ 18ನೇ ವರ್ಲ್ಡ್ ಚಾಂಪಿಯನ್‌ಶಿಪ್ ಕಿರೀಟವಾಗಿದೆ. ಫಲಿತಾಂಶ : ಪಂಕಜ್ ಅಡ್ವಾಣಿಗೆ ಆಮಿರ್ ಸಾರ್ಕೊಶ್ ವಿರುದ್ಧ 8-2(19-71, 79-53, 98-23, 69-62, 60-05, 0-134, 75-07, 103-4, 77-13, 67-47) ಫ್ರೇಮ್‌ಗಳ ಅಂತರದಲ್ಲಿ ಜಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News