ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ ಬಿಸಿಸಿಐಗೆ 52.24 ಕೋ.ರೂ.ದಂಡ
Update: 2017-11-29 18:47 IST
ಹೊಸದಿಲ್ಲಿ, ನ.29: ಐಪಿಎಲ್ ಮಾಧ್ಯಮ ಹಕ್ಕುಗಳಿಗೆ ಸಂಬಂಧಿಸಿ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆ ನಡೆಸಿರುವ ಬಿಸಿಸಿಐ ವಿರುದ್ಧ ಭಾರತೀಯ ಸ್ಪರ್ಧಾತ್ಮಕ ಆಯೋಗ ಬುಧವಾರ 52.24 ಕೋ.ರೂ.ದಂಡ ವಿಧಿಸಿದೆ.
ಕಳೆದ ಮೂರು ಹಣಕಾಸು ವರ್ಷದಲ್ಲಿ ಬಿಸಿಸಿಐನ ಸಂಬಂಧಿತ ವಹಿವಾಟಿನಲ್ಲಿ 52.24 ಕೋ.ರೂ. ದಂಡ ವಿಧಿಸಲಾಗಿದೆ ಎಂದು ಸ್ಪರ್ಧಾತ್ಮಕ ಆಯೋಗ ತನ್ನ 44 ಪುಟಗಳ ಆದೇಶದಲ್ಲಿ ತಿಳಿಸಿದೆ.
2013-14, 2014-15 ಹಾಗೂ 2015-16ರ ಹಣಕಾಸು ವರ್ಷದಲ್ಲಿ ಬಿಸಿಸಿಐನ ಸರಾಸರಿ ವಹಿವಾಟು 1,164.7 ಕೋ.ರೂ. ಆಗಿದೆ.
ಐಪಿಎಲ್‌ನ ಮಾಧ್ಯಮ ಹಕ್ಕು ಒಪ್ಪಂದದಲ್ಲಿ ಆಕ್ಷೇಪಾರ್ಹ ಷರತ್ತುಗಳಿವೆ. ಪ್ರಸಾರ ಹಕ್ಕುಗಳ ಬಿಡ್ಡರ್‌ಗಳ ವಾಣಿಜ್ಯ ಹಿತಾಸಕ್ತಿ ಕಾಪಾಡಲು ಹಾಗೂ ಬಿಸಿಸಿಐನ ಆರ್ಥಿಕ ಹಿತಾಸಕ್ತಿಗೆ ಪೂರಕವಾಗಿ ಬಿಸಿಸಿಐ ಇದನ್ನು ಪ್ರಜ್ಞಾಪೂರ್ವಕವಾಗಿ ಅನುಸರಿಸುತ್ತಿದೆ ಎಂದು ಆಯೋಗ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.
2013ರ ಫೆಬ್ರವರಿಯಲ್ಲಿ ಕಾವಲು ಸಮಿತಿಯು ಬಿಸಿಸಿಐಗೆ 52.24 ಕೋ.ರೂ. ದಂಡ ಹೇರಿತ್ತು.