ಪ್ಲಾಸ್ಟಿಕ್ ಬಾಟಲಿಯೊಳಗೆ ತಲೆ ಸಿಲುಕಿ ಪರದಾಡಿದ ನಾಯಿಯ ರಕ್ಷಣೆ

Update: 2017-11-30 06:45 GMT

ಉಡುಪಿ, ನ.30: ಚಾಕಲೇಟ್ ಬಾಟಲಿಯೊಳಗೆ ತಲೆ ಸಿಲುಕಿದ್ದರಿಂದ ಆಹಾರ ನೀರಿಲ್ಲದೆ ಕಳೆದು ಎಂಟು ದಿನಗಳಿಂದ ಸುತ್ತಾಡುತ್ತ, ಅಸಹಾಯಕ ಸ್ಥಿತಿಯಲ್ಲಿದ್ದ ಬೀದಿನಾಯಿಯೊಂದನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ ಘಟನೆ ಗುರುವಾರ ನಗರದ ಒಳಕಾಡು ವಾರ್ಡಿನಲ್ಲಿ ನಡೆದಿದೆ.

ಬಾಟಲಿಯೊಳಗೆ ತಲೆ ಸಿಲುಕಿಕೊಂಡಿದ್ದರಿಂದ ನಾಯಿಯ ಚಿಂತಾಜನಕ ಪರಿಸ್ಥಿತಿಯಲ್ಲಿತ್ತು. ಈ ಬಗ್ಗೆ ಮಾಹಿತಿ ಅರಿತ ಸಮಾಜಸೇವಕ ನಿತ್ಯಾನಂದ ಒಳಕಾಡು ಕಳೆದ ಏಳು ದಿನಗಳಿಂದ ನಾಯಿಯನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಅದು ತಪ್ಪಿಸಿಕೊಳ್ಳುತ್ತಿತ್ತು. ಬಳಿಕ ಅನ್ನ ಆಹಾರ ಇಲ್ಲದೆ ನಿತ್ರಾಣಗೊಂಡ ನಾಯಿ ಇಂದು ಸುಲಭವಾಗಿ ಸೆರೆ ಸಿಕ್ಕಿದೆ. ತದನಂತರ ನಿತ್ಯಾನಂದ ಒಳಕಾಡು, ವಿನಯಚಂದ್ರ ಸಾಸ್ತನ ಸೇರಿ  ನಾಯಿಯ ತಲೆಯಿಂದ ಬಾಟಲಿಯನ್ನು ಬೆರ್ಪಡಿಸಿದ್ದಾರೆ. ನಂತರ ನಾಯಿ ಬದುಕಿದೆಯೇ ಬಡ ಜೀವವೆಂದು ಪಲಾಯನ ಮಾಡಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News