'ಸುಗಂಧ' ದ್ವೈಮಾಸಿಕ ಬಿಡುಗಡೆ

Update: 2017-11-30 06:28 GMT

ಬಿ.ಸಿ.ರೋಡ್, ನ.30: ಅಲ್ ಅಝ್'ಹಾರ್ ಸಾಹಿತ್ಯ ಅಕಾಡಮಿ ಪ್ರಕಾಶನದ 'ಸುಗಂಧ' ದ್ವೈಮಾಸಿಕ ಇತ್ತೀಚೆಗೆ ಬಿಡುಗಡೆಗೊಂಡಿತು.

ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ದಶವಾರ್ಷಿಕದ ಸ್ವಾಗತ ಸಂಘ ಕನ್ವೆನ್ಷನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಸ್ತದ ಉಪಾಧ್ಯಕ್ಷ ಶೈಖುನಾ ಮಿತ್ತಬೈಲ್ ಉಸ್ತಾದ್ ಹಾಗೂ ಶೈಖುನಾ ಪಯ್ಯಕ್ಕಿ ಉಸ್ತಾದರು ಬಂಟ್ವಾಳದ ಇಸ್ಮಾಯಿಲ್ ಅರಬಿ ಅವರಿಗೆ ಪತ್ರಿಕೆಯನ್ನು ಹಸ್ತಾಂತರಿಸುವ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಅಶ್ರಫ್ ಫೈಝಿ, ಬನಾರಿ ಫೈಝಿ, ಹಮೀದ್ ದಾರಿಮಿ, ಅಬ್ಬಾಸ್ ಫೈಝಿ ಪುತ್ತಿಗೆ, ಮಜೀದ್ ದಾರಿಮಿ, ಇಸ್ಮಾಯಿಲ್ ಯಮಾನಿ, ನಝೀರ್ ಅಝ್'ಹರಿ, ರಝ್ಝಾಕ್ ಅಝ್'ಹರಿ, ಸ್ವಾದಿಕ್ ಅಝ್'ಹರಿ, ಶರೀಫ್ ಅಝ್'ಹರಿ, ಅನ್ವರ್ ಅಝ್'ಹರಿ, ಅಶ್ರಫ್ ಅಝ್'ಹರಿ, ರಶೀದ್ ಅಝ್ಹರಿ  ಮೊದಲಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮಿತ್ತಬೈಲ್ ಶೈಖ್ ವಲಿಯುಲ್ಲಾಹಿ,(ರ) ಮಝಾರದಲ್ಲಿ ಕೂಟು ಝಿಯಾರತ್  ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News