ಕೊಡಾಜೆಯಲ್ಲಿ ಖಾಸಗಿ ಬಸ್ ಪಲ್ಟಿ

Update: 2017-11-30 08:45 GMT

ಬಂಟ್ವಾಳ, ನ.30: ಚಾಲಕನ ನಿಯಂತ್ರಣ ಕಳೆದುಕೊಂಡು ಖಾಸಗಿ ಬಸ್ಸೊಂದು ರಸ್ತೆಯಿಂದ ಹೊರನುಗ್ಗಿ ಭಾಗಶಃ ಉರುಳಿದ ಸ್ಥಿತಿಯಲ್ಲಿ ನಿಂತ ಘಟನೆ ಇಂದು ಬೆಳಗ್ಗೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಕೊಡಾಜೆ ಎಂಬಲ್ಲಿ ನಡೆದಿದೆ.

ಖಾಸಗಿ ಬಸ್ ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಹೆದ್ದಾರಿಯಿಂದ ಹೊರಳಿ ರಸ್ತೆ ಬದಿಯ ಪೊದೆಗೆ ನುಗ್ಗಿ ಸಂಪೂರ್ಣ ವಾಲಿಕೊಂಡು ನಿಂತಿದೆ.

ಈ ಸಂದರ್ಭ ಬಸ್ಸಿನಲ್ಲಿ ಸುಮಾರು 20ಕ್ಕಿಂತಲೂ ಅಧಿಕ ಪ್ರಯಾಣಿಕರಿದ್ದರೂ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News