ರೈಲಿನಲ್ಲಿ ನೀಡಲಾಗುವ ಕಂಬಳಿಯನ್ನು 15 ದಿನಕ್ಕೊಮ್ಮೆ ಒಗೆಯಲು ಸೂಚನೆ
Update: 2017-11-30 21:18 IST
ಹೊಸದಿಲ್ಲಿ, ನ.30: ರೈಲಿನಲ್ಲಿ ನೀಡಲಾಗುವ ಕಂಬಳಿ ಕೊಳಕಾಗಿದ್ದು ಗಬ್ಬು ವಾಸನೆ ಬರುತ್ತದೆ ಎಂಬುದು ಬಹುತೇಕ ಪ್ರಯಾಣಿಕರ ಗೊಣಗಾಟ. ಆದರೆ ಇನ್ನು ಮುಂದೆ ಈ ಸಮಸ್ಯೆ ಇರದು. ಕಂಬಳಿಯನ್ನು ಇನ್ನು 15 ದಿನಕ್ಕೊಮ್ಮೆ ಒಗೆದು ಸ್ವಚ್ಛಗೊಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.
ಇದುವರೆಗೆ ಎರಡು ತಿಂಗಳಿಗೊಮ್ಮೆ ಕಂಬಳಿಗಳನ್ನು ಒಗೆಯಲಾಗುತ್ತಿತ್ತು. 15 ದಿನಕ್ಕೊಮ್ಮೆ ಒಗೆಯುವುದರಿಂದ ಕಂಬಳಿಗಳ ಬಾಳಿಕೆಯ ಅವಧಿ ನಾಲ್ಕು ವರ್ಷದಿಂದ ಒಂದು ವರ್ಷಕ್ಕೆ ಇಳಿಯಲಿದೆ ಎಂದು ರೈಲ್ವೇ ಮಂಡಳಿ ತಿಳಿಸಿದೆ. ಅಲ್ಲದೆ ಹಗುರವಾದ, ನೂಲಿನ ಕಂಬಳಿಯನ್ನು ಒದಗಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ರೈಲ್ವೇ ಮಂಡಳಿ ತಿಳಿಸಿದೆ.