ಸಯೀದ್ ವಿರುದ್ಧ ಭಾರತ ಪುರಾವೆ ನೀಡಿಲ್ಲ: ಪಾಕ್ ಪ್ರಧಾನಿ
Update: 2017-11-30 22:17 IST
ಇಸ್ಲಾಮಾಬಾದ್, ನ. 30: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ, ಜಮಾಅತ್ ಉದ್ ದಾವ ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್ ವಿರುದ್ಧ ಭಾರತ ಯಾವುದೇ ಪುರಾವೆಯನ್ನು ನೀಡಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಹೇಳಿದ್ದಾರೆ.
ಇತ್ತೀಚೆಗೆ ಸಯೀದ್‌ನನ್ನು ಪಾಕಿಸ್ತಾನದ ನ್ಯಾಯಮಂಡಳಿಯೊಂದು ಗೃಹಬಂಧನದಿಂದ ಬಿಡುಗಡೆಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.
ಭಯೋತ್ಪಾದಕ ಸೂತ್ರಧಾರಿಯನ್ನು ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ದ್ವಿಪಕ್ಷೀಯ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬುದಾಗಿ ಅಮೆರಿಕ ಎಚ್ಚರಿಸಿದ ಬಳಿಕ ಅಬ್ಬಾಸಿ ಈ ಹೇಳಿಕೆ ನೀಡಿದ್ದಾರೆ.