×
Ad

ಐಸಿಸಿ ಅಂಡರ್-19 ವಿಶ್ವಕಪ್ ಅನಾವರಣ

Update: 2017-11-30 23:58 IST

ವೆಲ್ಲಿಂಗ್ಟನ್, ನ.30: ಐಸಿಸಿ ಅಂಡರ್-19 ವಿಶ್ವಕಪ್‌ನ್ನು ಗುರುವಾರ ವೆಲ್ಲಿಂಗ್ಟನ್‌ನಲ್ಲಿ ಅನಾವರಣಗೊಳಿಸಲಾಗಿದೆ.

2018ರ ಜ.13 ರಿಂದ ಫೆ.3ರ ತನಕ ನ್ಯೂಝಿಲೆಂಡ್‌ನ ನಾಲ್ಕು ನಗರಗಳ ಏಳು ತಾಣಗಳಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸಲಿವೆ.

ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ನ್ಯೂಝಿಲೆಂಡ್‌ನ ಕ್ರೀಡಾ ಸಚಿವ ಗ್ರಾಂಟ್ ರಾಬರ್ಟ್ ಸನ್, ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್, ನ್ಯೂಝಿಲೆಂಡ್ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ವೈಟ್ ಹಾಗೂ ಟೂರ್ನಿಯ ಸದ್ಭ್ಬಾವನಾ ರಾಯಭಾರಿ ಕೋರಿ ಆ್ಯಂಡರ್ಸನ್ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News