ಎಚ್‌ಐವಿಯಿಂದ ಮೆದುಳಿಗೆ ತೊಂದರೆ: ಅಧ್ಯಯನ

Update: 2017-12-01 16:22 GMT

ಜೊಹಾನ್ಸ್‌ಬರ್ಗ್, ಡಿ.1: ಹ್ಯೂಮನ್ ಡಿಫಿಶಿಯನ್ಸಿ ವೈರಸ್ (ಎಚ್‌ಐವಿ) ಪ್ರಾಥಮಿಕ ಹಂತದಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಎಚ್‌ಐವಿ ಪೀಡಿತ ಜನರು ಖಿನ್ನತೆ ಮತ್ತು ಮರೆಗುಳಿತನದಂತ ಮೆದುಳಿಗೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಾರೆ ಎಂಬುದು ಈ ಹಿಂದೆಯೇ ಸಂಶೋಧಕರ ಅರಿವಿಗೆ ಬಂದಿತ್ತು.

ಆದರೆ ಇದು ರೋಗಿಯ ದೈಹಿಕ ಅನಾರೋಗ್ಯಕ್ಕೆ ಸಂಬಂಧಪಟ್ಟಿದ್ದೇ ಅತವಾ ಎಚ್‌ಐವಿ ವೈರಾಣು ನೇರವಾಗಿ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆಯೇ ಎಂಬುದು ಇನ್ನು ಕೂಡಾ ಸ್ಪಷ್ಟವಾಗಿಲ್ಲ.

ಎಚ್‌ಐವಿಯು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಮ್ಮ ಸಂಶೋಧಕರ ತಂಡ ಪತ್ತೆಮಾಡಿದ್ದು ಇದು ರೋಗಿಯ ಅನಾರೋಗ್ಯ, ಆಯಾಸ ಅಥವಾ ಖಿನ್ನತೆಯಿಂದ ಉಂಟಾಗುವ ಕಾಯಿಲೆಗಳಲ್ಲ ಎಂಬುದು ಸ್ಪಷ್ಟ ಎಂದು ದಕ್ಷಿಣ ಆಫ್ರಿಕಾದ ಸ್ಟೆಲ್ಲೆನ್‌ಬೋಷ್ ವಿಶ್ವವಿದ್ಯಾಲಯದ ಸ್ಟೆಫನ್ ಡು ಪ್ಲೆಸಿಸ್ ತಿಳಿಸುತ್ತಾರೆ.

ಡು ಪ್ಲೆಸಿಸ್ ಮತ್ತವರ ತಂಡ ಎಚ್‌ಐವಿ ಪೀಡಿತ ಮತ್ತು ಎಚ್‌ಐವಿ ಸೋಂಕಿಲ್ಲದ ವ್ಯಕ್ತಿಗಳಿಗೆ ಮೆದುಳಿನ ನಿರ್ದಿಷ್ಟ ಭಾಗವನ್ನು ಉತ್ತೇಜಿಸುವ ಕೆಲಸವನ್ನು ಮಾಡಲು ನೀಡಿ ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಫ್‌ಎಂಆರ್‌ಐ)ವಿಧಾನದಿಂದ ಪರೀಕ್ಷಿಸಿದರು. ಏಡ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ವರದಿಯಲ್ಲಿ ಎಚ್‌ಐವಿ ಪೀಡಿತ ರೋಗಿಗಳು ಈ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಮೆದುಳಿನ ನಿರ್ದಿಷ್ಟ ಭಾಗಕ್ಕೆ ರಕ್ತ ಸಂಚಲನ ಕಡಿಮೆಯಾಗಿರುವುದು ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News