ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ನೋಟಿಸ್

Update: 2017-12-01 16:58 GMT

ಹೊಸದಿಲ್ಲಿ, ಡಿ.1: ‘ಮುಝಫ್ಫರ್ ನಗರ್-ದ ಬರ್ನಿಂಗ್ ಆಫ್ ಲವ್’ ಚಿತ್ರಕ್ಕೆ ನಿಷೇಧ ಹೇರಿರುವ ಉತ್ತರ ಪ್ರದೇಶ ಸರಕಾರದ ಕ್ರಮವನ್ನು ಪ್ರಶ್ನಿಸಿ ಶುಕ್ರವಾರ ಆದಿತ್ಯನಾಥ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

ಚಿತ್ರದ ನಿರ್ಮಾಪಕ ಮನೋಜ್ ಕುಮಾರ್ ಚಿತ್ರದ ಮೇಲೆ ನಿರ್ಬಂಧ ಹೇರಿರುವ ಉತ್ತರ ಪ್ರದೇಶ ಸರಕಾರದ ವಿರುದ್ಧ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

2013ರಲ್ಲಿ ನಡೆದ ಮುಝಫ್ಫರ್ ನಗರ ಗಲಭೆಯ ಸಂದರ್ಭ ಹಿಂದೂ ಮುಸ್ಲಿಮ್ ಜೋಡಿಯ ಪ್ರೇಮಕತೆಯನ್ನು ಈ ಚಿತ್ರ ೊಳಗೊಂಡಿದೆ.

ನವೆಂಬರ್ 17ರಂದು ಚಿತ್ರ ದೇಶಾದ್ಯಂತ ಬಿಡುಗಡೆಯಾಗಿತ್ತು. ಸೆನ್ಸಾರ್ ಬೋರ್ಡ್ ಈ ಚಿತ್ರಕ್ಕೆ UA ಪ್ರಮಾಣ ಪತ್ರವನ್ನೂ ನೀಡಿತ್ತು. ಆದರೆ ರಾಜ್ಯದ ಎಂಟು ಜಿಲ್ಲೆಗಳು ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News