ಲಂಕಾ: ‘ಒಖಿ’ ಚಂಡಮಾರುತಕ್ಕೆ 13 ಬಲಿ; ಐವರು ನಾಪತ್ತೆ

Update: 2017-12-02 16:03 GMT

ಕೊಲಂಬೊ, ಡಿ. 2: ದಕ್ಷಿಣ ಭಾರತದಲ್ಲಿ ದಾಂಧಲೆಗೈದಿರುವ ‘ಒಖಿ’ ಚಂಡಮಾರುತವು ಶ್ರೀಲಂಕಾಲ್ಲೂ ತನ್ನ ಪ್ರತಾಪವನ್ನು ತೋರಿಸಿದೆ. ಚಂಡಮಾರುತದ ಆಕ್ರಮಣಕ್ಕೆ ಸಿಲುಕಿ ದ್ವೀಪ ರಾಷ್ಟ್ರದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ಬುಧವಾರ ರಾತ್ರಿ ಪ್ರಬಲ ಗಾಳಿಯೊಂದಿಗೆ ಲಂಕಾದ ಹಲವು ಭಾಗಗಳಲ್ಲಿ ಲಕ್ಷಣಗಳನ್ನು ತೋರಿಸಿದ ಚಂಡಮಾರುತದಿಂದಾಗಿ 77,000ಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ವಿದ್ಯುತ್ ಪೂರೈಕೆ, ಅಗತ್ಯ ಸೇವೆಗಳು ಮತ್ತು ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಿದೆ. ಬಿರುಗಾಳಿಗೆ ಸಿಲುಕಿ ಹಲವು ಕಟ್ಟಡಗಳು ಹಾನಿಗೀಡಾಗಿವೆ. ಹಲವು ಬೃಹತ್ ಮರಗಳು ರಸ್ತೆಗೆ ಉರುಳಿ ಬಿದ್ದಿವೆ.

ಬುಧವಾರ ರಾತ್ರಿಯಿಂದೀಚೆಗೆ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ನಾಪತ್ತೆಯಾಗಿದ್ದಾರೆ.

ಚಂಡಮಾರುತವು ಈಗ ದ್ವೀಪದಿಂದ ದೂರ ಹೋಗುತ್ತಿದೆ ಎಂದು ಶ್ರೀಲಂಕಾದ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News