ನನ್ನ ಮತವೇ ನನಗೆ ಬಿದ್ದಿಲ್ಲ ಎನ್ನುತ್ತಿದ್ದಾರೆ ಮತ್ತೋರ್ವ ಅಭ್ಯರ್ಥಿ
ಲಕ್ನೋ, ಡಿ.3: ಉತ್ತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಳಸಲಾದ ಇವಿಎಂ ಬಗ್ಗೆ ಎಸ್ಪಿ ಅಭ್ಯರ್ಥಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೊನ್ನೆಯಷ್ಟೇ ಸೊನ್ನೆ ಮತ ಪಡೆದ ಸ್ವತಂತ್ರ ಅಭ್ಯರ್ಥಿಯೊಬ್ಬರು “ನಾನು ಹಾಕಿದ ಮತವೇ ನನಗೆ ಬಿದ್ದಿಲ್ಲ. ನನ್ನ ಕುಟುಂಬದಿಂದ ಮೂವರು ನನಗೆ ಮತ ಹಾಕಿದ್ದಾರೆ. ಅವರ ಮತವೂ ನನಗೆ ಬಿದ್ದಿಲ್ಲ” ಎಂದು ಆರೋಪಿಸಿದ್ದರು.
ಇದೀಗ ಜಾನಕಿಪುರಂನ ಎಸ್ಪಿ ಅಭ್ಯರ್ಥಿ ಅಪೂರ್ವ ವರ್ಮಾ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ ಎಂದು nationalheraldindia.com ವರದಿ ಮಾಡಿದೆ. ಅಪೂರ್ವ ಅವರು ಸೊನ್ನೆ ಮತ ಪಡೆದಿದ್ದು, ತಾನು ಹಾಕಿದ ಮತವೇ ತನಗೆ ಬಿದ್ದಿಲ್ಲ ಎಂದವರು ಆರೋಪಿಸಿದ್ದಾರೆ.
“ಬಿಜೆಪಿ ಅಲ್ಲದ ಪ್ರತಿಯೊಬ್ಬ ಅಭ್ಯರ್ಥಿಗಳು ಚುನಾವಣೆಯನ್ನು ರದ್ದು ಮಾಡುವಂತೆ ಹಾಗು ಮರು ಚುನಾವಣೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ” ಎಂದು ಅಪೂರ್ವ ಹೇಳಿರುವ ವಿಡಿಯೋವೊಂದು ಟ್ವಿಟ್ಟರ್ ನಲ್ಲಿದೆ.
ಜಾನಕಿಪುರಂ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಪೂರ್ವ ವರ್ಮಾ ಸ್ಪರ್ಧಿಸಿದ್ದರು. ತನ್ನ ಮತವೇ ತನಗೆ ಬಿದ್ದಿಲ್ಲ ಎಂದು ಹೇಳುತ್ತಿರುವ 2ನೆ ಅಭ್ಯರ್ಥಿಯಾಗಿದ್ದಾರೆ ಅಪೂರ್ವ.