ದ್ವಿತೀಯ ಟೆಸ್ಟ್: ಆಸ್ಟ್ರೇಲಿಯ 442/8 ಡಿಕ್ಲೇರ್

Update: 2017-12-03 18:07 GMT

ಅಡಿಲೇಡ್, ಡಿ.3: ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ಎರಡನೇ ದಿನ ಮೊದಲ ಇನಿಂಗ್ಸ್ ನಲ್ಲಿ 149 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 442 ರನ್ ಗಳಿಸಿ ಡಿಕ್ಲೇರ್ ಮಾಡಿದೆ.

ಈ ಸವಾಲಿಗೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ಆರಂಭಿಸಿದ್ದು, ದಿನದಾಟದಂತ್ಯಕ್ಕೆ 9.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 29 ರನ್ ಗಳಿಸಿದೆ.

ಆರಂಭಿಕ ದಾಂಡಿಗ ಅಲೆಸ್ಟೈರ್ ಕುಕ್ 11 ರನ್ ಮತ್ತು ಜೇಮ್ಸ್ ವಿನ್ಸ್ ಖಾತೆ ತೆರೆಯದೆ ಕ್ರೀಸ್‌ನಲ್ಲಿದ್ದಾರೆ.

 18 ರನ್ ಗಳಿಸಿದ್ದ ಮಾರ್ಕ್‌ಸ್ಟೋನ್‌ಮ್ಯಾನ್ ಅವರನ್ನು ಮಿಚೆಲ್ ಸ್ಟಾರ್ಕ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

  ಮಾರ್ಷ್ ಶತಕ: ಇದಕ್ಕೂ ಮೊದಲು ಆಸ್ಟ್ರೇಲಿಯದ ಶಾನ್ ಮಾರ್ಷ್ ಅವರು 5ನೇ ಟೆಸ್ಟ್ ಶತಕ ದಾಖಲಿಸಿದ್ದಾರೆ. ಏಳು ವರ್ಷಗಳ ಬಳಿಕ ಆಸ್ಟ್ರೇಲಿಯ ತಂಡದಲ್ಲಿ ಅಚ್ಚರಿಯ ಸ್ಥಾನ ಗಿಟ್ಟಿಸಿಕೊಂಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಪೈನೆ ಅವರು 57 ರನ್(102 ಎಸೆತ) ಗಳಿಸಿದರು.

ಪೈನೆ ಮತ್ತು ಮಾರ್ಷ್ ಅವರು 6ನೇ ವಿಕೆಟ್‌ಗೆ 85 ರನ್‌ಗಳ ಜೊತೆಯಾಟ ನೀಡಿದರು. 2010ರಲ್ಲಿ ಪೈನೆ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಆ ಬಳಿಕ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಆಸ್ಟ್ರೇಲಿಯ ಮೊದಲ ದಿನದಾಟದಂತ್ಯಕ್ಕೆ 81 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 209 ರನ್ ಗಳಿಸಿತ್ತು. ಪೀಟರ್ ಹ್ಯಾಂಡ್ಸ್‌ಕ್ಯಾಂಬ್ 36 ರನ್ ಮತ್ತು ಶಾನ್ ಮಾರ್ಷ್ 20 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇವರು 5ನೇ ವಿಕೆಟ್‌ಗೆ ಜೊತೆಯಾಟದಲ್ಲಿ 48ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಆಸ್ಟ್ರೇಲಿಯ ಇಂದಿನ ಓವರ್‌ನ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು.

ಹ್ಯಾಂಡ್ಸ್‌ಕ್ಯಾಂಬ್ ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೆ ಸ್ಟುವರ್ಟ್ ಬ್ರಾಡ್ ಅವರ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ನಿರ್ಗಮಿಸಿದರು. ಆರನೇ ವಿಕೆಟ್‌ಗೆ ಟಿಮ್ ಪೈನೆ ಅವರು ಮಾರ್ಷ್‌ಗೆ ಜೊತೆಯಾದರು.

ಮಿಚೆಲ್ ಸ್ಟಾರ್ಕ್ 6 ರನ್ ಗಳಿಸಿದರು. ಪ್ಯಾಟ್ ಕಮಿನ್ಸ್ (44) ಅರ್ಧಶತಕ ವಂಚಿತಗೊಂಡರು.ನಥಾನ್ ಔಟಾಗದೆ 10 ರನ್ ಗಳಿಸಿದರು.

ಇಂಗ್ಲೆಂಡ್‌ನ ಕ್ರೇಗ್ ಓವರ್ಟನ್ 105ಕ್ಕೆ 3 ವಿಕೆಟ್ ಸ್ಟುವರ್ಟ್ ಬ್ರಾಡ್ 72ಕ್ಕೆ 2, ಜೇಮ್ಸ್ ಆ್ಯಂಡರ್ಸನ್ ಮತ್ತು ಕ್ರಿಸ್ ವೋಕ್ಸ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

►ಆಸ್ಟ್ರೇಲಿಯ ಮೊದಲ ಇನಿಂಗ್ಸ್ 149 ಓವರ್‌ಗಳಲ್ಲಿ 442/8( ಶಾನ್ ಮಾರ್ಷ್ ಔಟಾಗದೆ 126, ಟಿಮ್ ಪೈನೆ 57, ಉಸ್ಮಾನ್ ಖ್ವಾಜಾ 53, ಕಮಿನ್ಸ್ 44; ಕ್ರೇಗ್ ಓವರ್ಟನ್ 105ಕ್ಕೆ 3)

►ಇಂಗ್ಲೆಂಡ್ ಮೊದಲ ಇನಿಂಗ್ಸ್ 9.1 ಓವರ್‌ಗಳಲ್ಲಿ 29/1( ಸ್ಟೋನ್‌ಮ್ಯಾನ್ 18; ಸ್ಟಾರ್ಕ್ 13ಕ್ಕೆ 1).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News