2018ರ ಅಂಡರ್-19 ವಿಶ್ವಕಪ್‌ಗೆ ಪೃಥ್ವಿ ಶಾ ನಾಯಕ

Update: 2017-12-03 18:11 GMT

ಹೊಸದಿಲ್ಲಿ, ಡಿ.3: ಭರವಸೆಯ ಮುಂಬೈನ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರು ಮುಂದಿನ ವರ್ಷ ನಡೆಯಲಿರುವ ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್‌ಗೆ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

 ಅಖಿಲ ಭಾರತ ಜೂನಿಯರ್ ತಂಡದ ಆಯ್ಕೆ ಸಮಿತಿಯು ವಿಶ್ವಕಪ್‌ಗೆ 16 ಮಂದಿ ತಂಡವನ್ನು ಆಯ್ಕೆ ಮಾಡಿದೆ. 16 ತಂಡಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದೆ. ವಿಶ್ವಕಪ್ ಟೂರ್ನಮೆಂಟ್ 2018, ಜ.13ರಿಂದ ಫೆ.3ರ ತನಕ ನ್ಯೂಝಿಲೆಂಡ್‌ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಪ್ರಭಾರ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಭಾರತ ಬಾಂಗ್ಲಾದೇಶದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಎತ್ತುವಲ್ಲಿ ಎಡವಿತ್ತು. ಫೈನಲ್‌ನಲ್ಲಿ ವಿಂಡೀಸ್ ವಿರುದ್ಧ ಸೋತು ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿತ್ತು.

 ಭಾರತದ 2000, 2008 ಮತ್ತು 2012ರಲ್ಲಿ ಪ್ರಶಸ್ತಿ ಜಯಿಸಿತ್ತು. ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಆಸ್ಟ್ರೇಲಿಯ ತಲಾ 3 ಬಾರಿ ಪ್ರಶಸ್ತಿ ಎತ್ತುವ ಮೂಲಕ ಯಶಸ್ವಿ ತಂಡಗಳಾಗಿವೆ.

ಆಸ್ಟ್ರೇಲಿಯ 1988, 2002 ಮತ್ತು 2010ರ ಆವೃತ್ತಿಯ ಚಾಂಪಿಯನ್ ಆಗಿದೆ.

ವಿಶ್ವಕಪ್ ತಯಾರಿಗೆ ಭಾರತದ ತಂಡದ ಪೂರ್ವ ತಯಾರಿ ಶಿಬಿರ ಡಿ.8ರಿಂದ 22ರ ತನಕ ನಡೆಯಲಿದೆ ಎಂದು ಚೌಧರಿ ತಿಳಿಸಿದ್ದಾರೆ.

 ಭಾರತ ಅಂಡರ್-19 ತಂಡ: ಪೃಥ್ವಿ ಶಾ(ನಾಯಕ), ಶುಭಮನ್ ಗಿಲ್(ಉಪನಾಯಕ), ಮನ್‌ಜೋತ್ ಕಲ್ರಾ, ಹಿಮಾಂಶು ರಾಣಾ, ಅಭಿಶೇಕ್ ಶರ್ಮಾ, ರಿಯಾನ ಪರಾಗ್, ಆರ್ಯನ್ ಜುಯಾಲ್(ವಿಕೆಟ್ ಕೀಪರ್), ಹಾರ್ವಿಕ್ ದೇಸಾಯಿ(ವಿಕೆಟ್ ಕೀಪರ್), ಶಿವಮ್ ಮಾವಿ, ಕಮಲೇಶ್ ನಾಗರ್‌ಕೋಟಿ, ಇಶಾಂತ್ ಪೊರೆಲ್ , ಅರ್ಶದೀಪ್ ಸಿಂಗ್, ಅಂಕುಲ್ ರಾಯ್, ಶಿವ ಸಿಂಗ್ ಮತ್ತು ಪಂಕಜ್ ಯಾದವ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News