×
Ad

ವಿಕಲಚೇತನ ಮಕ್ಕಳಿಗೆ ಆಟಿಕೆಗಳ ನೀಡಿದ ಬೆಲ್ಜಿಯಂ ಫುಟ್ಬಾಲ್ ಅಭಿಮಾನಿಗಳು!

Update: 2017-12-04 23:52 IST

ಬ್ರಸ್ಸಲ್ಸ್, ಡಿ.4: ಫುಟ್ಬಾಲ್ ಒಂದು ಸೊಗಸಾದ ಪಂದ್ಯ. ಕೇವಲ ಮೈದಾನದಲ್ಲಿ ಮಾತ್ರವಲ್ಲ, ಮೈದಾನದ ಹೊರಗೂ ಈ ಪಂದ್ಯ ವಿಭಿನ್ನ ವಿಷಯದಲ್ಲಿ ಸುದ್ದಿಯಾಗುತ್ತಿದೆ. ಬೆಲ್ಜಿಯಂನಲ್ಲಿ ನಡೆದ ಫುಟ್ಬಾಲ್ ಪಂದ್ಯ ಆರಂಭಕ್ಕೆ ಮೊದಲೇ ಫುಟ್ಬಾಲ್ ಅಭಿಮಾನಿಗಳು ಮಕ್ಕಳ ಆಟಿಕೆಗಳ ಸುರಿಮಳೆಗರೆದು ಎಲ್ಲರ ಹೃದಯ ಗೆದ್ದರು. ಈ ಆಟಿಕೆಗಳನ್ನು ವಿಕಲಚೇತನ ಮಕ್ಕಳಿಗೆ ಕಿಸ್ಮಸ್ ಉಡುಗೊರೆಯಾಗಿ ನೀಡಲಾಗುತ್ತದೆ.

 ವಿಕಲಚೇತನ ಮಕ್ಕಳಿಗೆ ಆಟಿಕೆಗಳನ್ನು ನೀಡುವುದಕ್ಕೆ ಸಂಬಂಧಿಸಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಉತ್ತಮವಾಗಿ ಸ್ಪಂದಿಸಿರುವ ಬೆಲ್ಜಿಯಂನ ಫುಟ್ಬಾಲ್ ಅಭಿಮಾನಿಗಳು ಆಟಿಕೆಗಳೊಂದಿಗೆ ಸ್ಟೇಡಿಯಂಗೆ ಆಗಮಿಸಿದ್ದರು. ತಾವು ಕುಳಿತ ಸ್ಥಳದಿಂದಲೇ ಪಿಚ್‌ನ ಸನಿಹ ಆಟಿಕೆಗಳನ್ನು ಎಸೆದು ಪಿಚ್ ಸನಿಹ ರಾಶಿ ಹಾಕಿದರು. ಮೈದಾನದ ಸಿಬ್ಬಂದಿ ಗೋಲ್ ಪೆಟ್ಟಿಗೆಯ ಬಳಿ ರಾಶಿ ಬಿದ್ದಿದ್ದ ಆಟಿಕೆಗಳನ್ನು ಸಂಗ್ರಹಿಸಲು ಹೆಚ್ಚಿನ ಸಮಯ ವ್ಯಯವಾಗಿದ್ದ ಹಿನ್ನೆಲೆಯಲ್ಲಿ ಪಂದ್ಯ ವಿಳಂಬವಾಗಿ ಆರಂಭವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News