ಪಾಟ್ರಕೋಡಿ: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ ಪ್ರತಿಭೋತ್ಸವ

Update: 2017-12-05 11:29 GMT

ವಿಟ್ಲ, ಡಿ. 5: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭೋತ್ಸವದಂತಹ ಕಾರ್ಯಕ್ರಮಗಳು ಪೂರಕ ಎಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಹೇಳಿದರು.

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಮಾಣಿ ಸೆಕ್ಟರ್ ವತಿಯಿಂದ ಪಾಟ್ರಕೋಡಿ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆದ ಕಲಾ ಸಾಹಿತ್ಯ ಕಲರವ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ತಕ್ಕ ಪ್ರೋತ್ಸಾಹ ನೀಡುವ ಬಗ್ಗೆ ಪೋಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಎಸ್ಸೆಸ್ಸೆಫ್‌ನ ಕಾರ್ಯವೈಖರಿ ಶ್ಲಾಘನೀಯ ಎಂದರು.

ಪ್ರತಿಭೋತ್ಸವ ಸ್ವಾಗತ ಸಮಿತಿ ಚೆಯರ್‌ಮೆನ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಇಬ್ರಾಹಿಂ ಹಂಝ ತಂಙಳ್ ಹಾದಿ ಧ್ವಜಾರೋಹಣ ಗೈದರು. ಸೈಯದ್ ಸಾಬಿತ್ ತಂಙಳ್ ಪಾಟ್ರಕೋಡಿ ಉದ್ಘಾಟಿಸಿದರು. ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ, ಎಸ್‌ವೈಎಸ್ ಬಂಟ್ವಾಳ ವಲಯಾಧ್ಯಕ್ಷ ಹಂಝ ಮದನಿ ಮಿತ್ತೂರು, ನಚ್ಚಬೆಟ್ಟು ದಾರುಲ್ ಮುಸ್ತಫಾ ಪ್ರೊಫೆಸರ್ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಮಾತನಾಡಿದರು.

ಪ್ರಮುಖರಾದ ಕೆ.ಬಿ. ಕಾಸಿಂ ಹಾಜಿ ಪರ್ಲೊಟ್ಟು, ಸುಲೈಮಾನ್ ಸಅದಿ ಪಾಟ್ರಕೋಡಿ, ಅಬ್ದುಲ್ ಖಾದರ್ ಮದನಿ ನೇರಳಕಟ್ಟೆ, ಯೂಸುಫ್ ಹಾಜಿ ಸೂರಿಕುಮೇರು, ಅಡ್ವಕೇಟ್ ಶಾಕಿರ್ ಹಾಜಿ, ಕೆ.ಎಸ್. ಯೂಸುಫ್ ಪಾಟ್ರಕೋಡಿ, ಕಾಸಿಂ ಪಾಟ್ರಕೋಡಿ, ಇಬ್ರಾಹಿಂ ಸಅದಿ ಮಾಣಿ, ಕೊಂಬಾಳಿ ಝುಹ್‌ರಿ, ಹನೀಫ್ ಮುಸ್ಲಿಯಾರ್ ಪೆರ್ನೆ, ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು, ಹಾಫಿಳ್ ತೌಸೀಫ್ ಕೆಮ್ಮಾನ್, ಪಿ.ಎ. ಮುಹಮ್ಮದ್ ರಫೀಕ್ ಮದನಿ ಪಾಟ್ರಕೋಡಿ, ಹಾಜಿ ಯೂಸುಫ್ ಶಹೀದ್ ನೇರಳಕಟ್ಟೆ, ಹಬೀಬ್ ಸೇರಾ, ಅಬ್ದುಲ್ ರಶೀದ್ ಪೆರ್ನೆ, ಇಕ್ಬಾಲ್ ಬಪ್ಪಳಿಗೆ, ಅಶ್ರಫ್ ಪಾಟ್ರಕೋಡಿ, ಸಿದ್ದೀಕ್ ಹಾಜಿ ಕಬಕ, ಹೈದರ್ ಅಳಕೆಮಜಲು, ಕೆ.ಬಿ. ಮುಹಮ್ಮದ್, ಅಬ್ಬಾಸ್ ಪಿ.ಕೆ. ಪರ್ಲೊಟ್ಟು, ಎನ್.ಕೆ. ಕಾಸಿಂ ನೇರಳಕಟ್ಟೆ, ಜಬ್ಬಾರ್ ಪಾಟ್ರಕೋಡಿ, ವಾಜಿದ್ ನೇರಳಕಟ್ಟೆ, ಶಾಹುಲ್ ಹಮೀದ್ ಪರ್ಲೊಟ್ಟು, ಸಿನಾನ್ ಪರ್ಲೊಟ್ಟು ಮೊದಲಾದವರು ಭಾಗವಹಿಸಿದ್ದರು.

ಆರ್.ಕೆ. ಮದನಿ ಅಮ್ಮೆಂಬಳ, ಅಶ್ರಫ್ ಮಾಸ್ಟರ್ ಬಿ.ಸಿ.ರೋಡು, ಎ.ಕೆ. ನಂದಾವರ, ಅಬ್ದುಲ್ ಲತೀಫ್ ಆತೂರು, ಮಾಲಾಡಿ ಸಖಾಫಿ ವಿವಿಧ ಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.

ಪಾಟ್ರಕೋಡಿ ತಂಡಕ್ಕೆ ಚಾಂಪಿಯನ್ ಪ್ರಶಸ್ತಿ

ಪ್ರತಿಭೋತ್ಸವ 2017ರ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಟ್ರಕೋಡಿ ತಂಡವು ಪ್ರಥಮ, ಮಾಣಿ ದ್ವಿತೀಯ ಹಾಗೂ ಬುಡೋಳಿ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ವೈಯುಕ್ತಿಕ ಚಾಂಪಿಯನ್‌ಶಿಪ್‌ನಲ್ಲಿ ಪಾಟ್ರಕೋಡಿ ತಂಡದ ರಮ್ಲಾನ್ ಕುಂಞಿ ಪ್ರಥಮ, ಸೂರಿಕುಮೇರು ತಂಡದ ಝೈನುದ್ದೀನ್ ದ್ವಿತೀಯ ಹಾಗೂ ಮಾಣಿ ತಂಡದ ಮುಹಿಯುದ್ದೀನ್ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷ ಫಾರೂಕ್ ಹನೀಫಿ ಪರ್ಲೊಟ್ಟು ಸ್ವಾಗತಿಸಿ, ಖಲಂದರ್ ಪಾಟ್ರಕೋಡಿ ವಂದಿಸಿದರು. ಪ್ರತಿಭೋತ್ಸವ ಸಮಿತಿ ಕನ್ವೀನರ್ ಹಾರಿಸ್ ಮದನಿ ಪಾಟ್ರಕೋಡಿ ಹಾಗೂ ಮಾಣಿ ಸೆಕ್ಟರ್ ಎಸ್ಸೆಸ್ಸೆಫ್ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News