ಮೋದಿ ಭಾಷಣದಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ ಹೊರತು ಗುಜರಾತ್ ಭವಿಷ್ಯದ ಬಗ್ಗೆಯಲ್ಲ

Update: 2017-12-05 17:22 GMT

ಗುಜರಾತ್, ಡಿ.5: ಪ್ರಧಾನಿಯ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರು ತನ್ನ ಭಾಷಣದಲ್ಲಿ ಕಾಂಗ್ರೆಸ್ ನ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಗುಜರಾತ್ ನ ಭವಿಷ್ಯದ ಬಗ್ಗೆ ಅಲ್ಲ ಎಂದಿದ್ದಾರೆ.

ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗುಜರಾತ್ ನ ಜನತೆಗೆ ‘ಬಂಗಾರದ ಭವಿಷ್ಯ’ವಿದೆ ಎಂದ ಅವರು , “ನಾವು ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಗು ನೋಟ್ ಬ್ಯಾನ್ ನಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದಿದ್ದಾರೆ.

“ ನಿನ್ನೆ ಪ್ರಧಾನಿಯವರು ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದನ್ನು ನಾನು ಗಮನಿಸಿದೆ. ಆ ಭಾಷಣದ 60 ಶೇ.ದಷ್ಟು ಭಾಗ ಮೋದಿಯವರು ನನ್ನ ಹಾಗು ಕಾಂಗ್ರೆಸ್ ಪಕ್ಷದ ಬಗ್ಗೆಯೂ ಮಾತನಾಡಿದ್ದಾರೆ” ಎಂದು ರಾಹುಲ್ ಹೇಳಿದರು.

ಈ ಚುನಾವಣೆಯು ಬಿಜೆಪಿ-ಕಾಂಗ್ರೆಸ್ ಬಗ್ಗೆ ಅಲ್ಲ, ಮೋದಿ ಅಥವಾ ನನ್ನ  ಬಗ್ಗೆಯಲ್ಲ. ಇದು ಗುಜರಾತ್ ನ ಭವಿಷ್ಯದ ಬಗ್ಗೆಯಾಗಿದೆ. ಆದರೆ ಮೋದಿಯವರು ತಮ್ಮ ಭಾಷಣದಲ್ಲಿ ಎಲ್ಲೂ ಗುಜರಾತ್ ನ ಭವಿಷ್ಯದ ಬಗ್ಗೆ ಮಾತನಾಡಿಲ್ಲ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News