×
Ad

ಬೆಲ್ಜಿಯಂಗೆ ಭರ್ಜರಿ ಜಯ

Update: 2017-12-05 23:37 IST

ಭುವನೇಶ್ವರ, ಡಿ.5: ಹಾಲೆಂಡ್ ತಂಡವನ್ನು 3-0 ಅಂತರದಿಂದ ಮಣಿಸಿರುವ ಬೆಲ್ಜಿಯಂ ತಂಡ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯಲ್ಲ್ಲಿ ಆಡಿರುವ ಎಲ್ಲ 3 ಲೀಗ್ ಪಂದ್ಯಗಳನ್ನು ಗೆದ್ದ ಏಕೈಕ ತಂಡ ಎನಿಸಿಕೊಂಡಿದೆ. ಬೆಲ್ಜಿಯಂನ ಪರ ಲಾಕ್ ಲಿಪಾರ್ಟ್ (19ನೇ,20ನೇ ನಿಮಿಷ) ಹಾಗೂ ಟಾಮ್ ಬೂನ್(32ನೇ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದ್ದಾರೆ. ಬೆಲ್ಜಿಯಂ ಬುಧವಾರ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ. ಭಾರತ 3 ಲೀಗ್ ಪಂದ್ಯದಲ್ಲಿ 2ರಲ್ಲಿ ಸೋಲು, 1ರಲ್ಲಿ ಡ್ರಾ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News