ಶ್ರೀಲಂಕಾ ತಂಡ ಪ್ರಕಟ: ಪೆರೇರ, ಗುಣರತ್ನೆ ವಾಪಸ್
ಕೊಲಂಬೊ, ಡಿ.5: ಭಾರತ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿರುವ ಶ್ರೀಲಂಕಾ ತಂಡ ಮಂಗಳವಾರ 16 ಸದಸ್ಯರುಗಳಿರುವ ತಂಡವನ್ನು ಪ್ರಕಟಿಸಿದೆ. ಸುಮಾರು ಆರು ತಿಂಗಳ ಬಳಿಕ ಆರಂಭಿಕ ಆಟಗಾರ ಕುಶಾಲ್ ಪರೇರ ತಂಡಕ್ಕೆ ವಾಪಸಾಗಿದ್ದಾರೆ. ಪೆರೇರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಬೆರಳುನೋವಿನಿಂದಾಗಿ ನಾಲ್ಕು ತಿಂಗಳ ಕಾಲ ತಂಡದಿಂದ ದೂರ ಉಳಿದಿದ್ದ ಆಲ್‌ರೌಂಡರ್ ಅಸೆಲಾ ಗುಣರತ್ನೆ ತಂಡಕ್ಕೆ ಮರಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಬ್ಯಾಟ್ಸ್‌ಮನ್ ಕುಶಾಲ್ ಮೆಂಡಿಸ್ ಏಕದಿನ ತಂಡದಿಂದಲೂ ಹೊರಗುಳಿದಿದ್ದಾರೆ.
ಶ್ರೀಲಂಕಾ ಏಕದಿನ ತಂಡ
ತಿಸ್ಸಾರ ಪೆರೇರ(ನಾಯಕ),ಉಪುಲ್ ತರಂಗ, ಧನುಷ್ಕಾ ಗುಣತಿಲಕ, ಲಹಿರು ತಿರಿಮನ್ನೆ, ಆ್ಯಂಜೆಲೊ ಮ್ಯಾಥ್ಯೂಸ್, ಅಸೆಲಾ ಗುಣರತ್ನೆ, ನಿರೊಶನ್ ಡಿಕ್ವೆಲ್ಲಾ(ವಿಕೆಟ್‌ಕೀಪರ್), ಚತುರಂಗ ಡಿ ಸಿಲ್ವಾ, ಅಖಿಲ್ ಧನಂಜಯ, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ಸದೀರ ಸಮರವಿಕ್ರಮ, ಧನಂಜಯ ಡಿಸಿಲ್ವಾ, ದುಶ್ಮಂತ್ ಚಾಮೀರ, ಸಚಿತ್ ಪಥಿರಣ ಹಾಗೂ ಕುಶಾಲ್ ಪೆರೇರ.