×
Ad

ಗೋಲ್‌ಕೀಪರ್ ಗುರುಪ್ರೀತ್ ಸಿಂಗ್‌ಗೆ 3 ಲಕ್ಷ ರೂ. ದಂಡ

Update: 2017-12-05 23:59 IST

ಬೆಂಗಳೂರು, ಡಿ.5: ಎಐಎಫ್‌ಎಫ್ ಶಿಸ್ತು ಸಂಹಿತೆ ಆರ್ಟಿಕಲ್-49ನ್ನು ಉಲ್ಲಂಘಿಸಿರುವ ಬೆಂಗಳೂರು ಫುಟ್ಬಾಲ್ ಕ್ಲಬ್‌ನ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್‌ಗೆ 3 ಲಕ್ಷ ರೂ. ದಂಡ ಹಾಗೂ ಇಂಡಿಯನ್ ಸೂಪರ್ ಲೀಗ್‌ನ(ಐಎಸ್‌ಎಲ್)ಎರಡು ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ.

ಗೋವಾದಲ್ಲಿ ನ.30 ರಂದು ಗೋವಾ ಎಫ್‌ಸಿ ಹಾಗೂ ಬೆಂಗಳೂರು ಎಫ್‌ಸಿ ನಡುವೆ ನಡೆದಿದ್ದ ಐಎಸ್‌ಎಲ್ ಪಂದ್ಯದ ವೇಳೆ ಗುರುಪ್ರೀತ್‌ರ ಹಿಂಸಾತ್ಮಕ ವರ್ತನೆ ಬಗ್ಗೆ ಮ್ಯಾಚ್ ರೆಫರಿ ನೀಡಿದ ವರದಿಯ ಆಧಾರದಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್)ಶಿಸ್ತು ಸಮಿತಿಯು ಈ ನಿರ್ಧಾರವನ್ನು ಪ್ರಕಟಿಸಿದೆ.

 ‘‘ಬೆಂಗಳೂರು ಎಫ್‌ಸಿ ತಂಡದ ಗುರುಪ್ರೀತ್ ಸಿಂಗ್ ಸಂಧುಗೆ 3 ಲಕ್ಷ ರೂ. ದಂಡ ಹಾಗೂ ಎರಡು ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ. ಅವರು ಇನ್ನು 10 ದಿನಗಳಲ್ಲಿ ಎಐಎಫ್‌ಎಫ್ ಖಾತೆಗೆ ಹಣ ಜಮೆ ಮಾಡಬೇಕು’’ ಎಂದು ಎಐಎಫ್‌ಎಫ್ ಶಿಸ್ತು ಸಮಿತಿ ವರದಿಯಲ್ಲಿ ಹೇಳಿದೆ.

ಗುರುಪ್ರೀತ್ ಗುರುವಾರ ಹಾಗೂ ಶುಕ್ರವಾರ ಪುಣೆ ಹಾಗೂ ಗುವಾಹಟಿಯಲ್ಲಿ ನಡೆಯಲಿರುವ ನಾರ್ಥ್ ಈಸ್ಟ್ ಇಲೆವೆನ್ ಹಾಗೂ ಪುಣೆ ಎಫ್‌ಸಿ ತಂಡದ ವಿರುದ್ಧ ಪಂದ್ಯದಲ್ಲಿ ಆಡುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News