ಯುಎಇಯಿಂದ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳ ರವಾನೆ: ಯೋಜನೆಗೆ ಚಾಲನೆ

Update: 2017-12-07 16:16 GMT

ದುಬೈ, ಡಿ. 7: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ನಾಲ್ವರು ಗಗನಯಾತ್ರಿಗಳನ್ನು ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ಕ್ಕೆ ಕಳುಹಿಸುವ ಉದ್ದೇಶವನ್ನು ಹೊಂದಿರುವ ದೇಶದ ಮೊದಲ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ಬುಧವಾರ ಚಾಲನೆ ನೀಡಿದರು.

‘‘ಪ್ರಥಮ ಯುಎಇ ಬಾಹ್ಯಾಕಾಶ ಗಗನಯಾತ್ರಿ ಕಾರ್ಯಕ್ರಮದ ಆರಂಭದೊಂದಿಗೆ ದೇಶದ ಇತಿಹಾಸದಲ್ಲಿ ಇಂದು ನೂತನ ಅಧ್ಯಾಯವೊಂದು ಆರಂಭಗೊಂಡಿದೆ’’ ಎಂದು ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿಯೂ ಆಗಿರುವ ಶೇಖ್ ಮುಹಮ್ಮದ್ ಹೇಳಿಕೆಯೊಂದರಲ್ಲಿ ತಿಳಿಸಿದರು.

2021ರ ವೇಳೆಗೆ ಮಂಗಳನ ಕಕ್ಷೆಗೆ ಮಾನವರಹಿತ ಶೋಧ ನೌಕೆಯೊಂದನ್ನು ಕಳುಹಿಸುವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಯುಎಇ ಈಗಾಗಲೇ ಘೋಷಿಸಿದೆ. ತನ್ನ ಈ ಯೋಜನೆಗೆ ಅದು ‘ಹೋಪ್’ ಎಂದು ಹೆಸರಿಟ್ಟಿದೆ. ಈ ಯೋಜನೆ ಯಶಸ್ವಿಯಾದರೆ ಈ ಸಾಧನೆಗೈದ ಮೊದಲ ಅರಬ್ ದೇಶ ಯುಎಇ ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News