×
Ad

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಜಿಎಸ್‌ಟಿ ಪ್ರಬಂಧ ಬರೆಯಲು ಹೇಳಿದ ಬನಾರಸ್ ವಿವಿ !

Update: 2017-12-07 22:37 IST

ಹೊಸದಿಲ್ಲಿ,ಡಿ.7: ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಎಂ.ಎ. ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗಳು ತಮ್ಮ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಜಿಎಸ್‌ಟಿ ಹಾಗೂ ಜಾಗತೀಕರಣದ ಕುರಿತ ಪ್ರಶ್ನೆಗಳಿಗೆ ಉತ್ತರ ಬರೆಯುವಾಗ ಕಕ್ಕಾಬಿಕ್ಕಿಯಾಗಬೇಕಾಯಿತು.

   ಯಾಕೆಂದರೆ ಪ್ರಶ್ನೆ ಪತ್ರಿಕೆಯಲ್ಲಿ ಹಲವು ಪ್ರಶ್ನೆಗಳು ಪಠ್ಯದಿಂದ ಹೊರತಾಗಿದ್ದವು. ಇದರ ಜೊತೆ ಒಟ್ಟು 70 ಅಂಕಗಳ ಪ್ರಶ್ನೆಪತ್ರಿಕೆಯಲ್ಲಿ 15 ಅಂಕಗಳನ್ನು, ‘‘ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಜಿಎಸ್‌ಟಿಯ ಸ್ವರೂಪ ಅಥವಾ ಮನು ಮಹರ್ಷಿಯು ಭಾರತೀಯ ಜಾಗತೀಕರಣದ ಮೊದಲ ಚಿಂತಕ” ಈ ಎರಡು ವಿಷಯಗಳಲ್ಲಿ ಒಂದರ ಕುರಿತಾಗಿ ಪ್ರಬಂಧ ಬರೆಯುವುದಕ್ಕೆ ಮೀಸಲಿಡಲಾಗಿತ್ತು.

    ಆದರೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿದ ಪ್ರೊ. ಕೌಶಲ್ ಕಿಶೋರ್ ಮಿಶ್ರಾ, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಜಿಎಸ್‌ಟಿ ಹಾಗೂ ಜಾಗತೀಕರಣದಂತಹ ಆಧುನಿಕ ವಿಷಯಗಳ ಬಗ್ಗೆ ಇಬ್ಬರು ಪುರಾತನ ಚಿಂತಕರು ಯಾವ ಪರಿಕಲ್ಪನೆಯನ್ನು ಹೊಂದಿದ್ದರೆಂಬುದನ್ನು ವಿದ್ಯಾರ್ಥಿಗಳು ಅರಿಯುವಂತೆ ಮಾಡುವುದು ಹಾಗೂ ಅವರ ಸಿದ್ಧಾಂತಗಳನ್ನು ಬೋಧಿಸುವುದೇ ಇದರ ಉದ್ದೇಶವಾಗಿದೆ ಎಂದಿದ್ದಾರೆ. ಇಂತಹ ವಿಷಯಗಳು ಪಠ್ಯಪುಸ್ತಕದಲ್ಲಿಲ್ಲದಿದ್ದರೇನು, ವಿದ್ಯಾರ್ಥಿಗಳಿಗೆ ಹೊಸ ವಿಷಯಗಳನ್ನು ತಿಳಿಸುವುದು ನಮ್ಮ ಕೆಲಸವಲ್ಲವೇ ? ಎಂದವರು ಪ್ರಶ್ನಿಸಿರುವುದಾಗಿ, ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News