ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿ: ಅರ್ಜೆಂಟೀನ ಸೆಮಿಫೈನಲ್‌ಗೆ

Update: 2017-12-07 18:41 GMT

ಭುವನೇಶ್ವರ, ಡಿ.7: ಇಂಗ್ಲೆಂಡ್ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿರುವ ಅರ್ಜೆಂಟೀನ ತಂಡ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತೇರ್ಗಡೆಯಾಗಿದೆ.

ಅರ್ಜೆಂಟೀನ ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಆತಿಥೇಯ ಭಾರತ ತಂಡವನ್ನು ಮುಖಾಮುಖಿಯಾಗಲಿದೆ.

ಗುರುವಾರ ಇಲ್ಲಿ ಅತ್ಯಂತ ರೋಚಕವಾಗಿ ಸಾಗಿದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನದ ಪರ 200ನೇ ಪಂದ್ಯ ಆಡಿದ ಲುಕಾಸ್ ವಿಲಾ(21ನೇ ನಿಮಿಷ), ಮಥಾಯಸ್ ಪಾರ್ಡೆಸ್(29ನೇ ನಿಮಿಷ) ಹಾಗೂ ಜುಯಾನ್ ಗಿಲಾರ್ಡಿ(34ನೇ ನಿಮಿಷ)ತಲಾ ಒಂದು ಗೋಲು ಬಾರಿಸಿದರು. ಇಂಗ್ಲೆಂಡ್‌ನ ಪರ ಡೇವಿಡ್ ಕಾಂಡನ್(29ನೇ ನಿಮಿಷ) ಹಾಗೂ ಆಡಮ್ ಡಿಕ್ಸನ್(60ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News