ಜೀವಂತ ಮಗುವನ್ನು ‘ಮೃತ’ ಎಂದು ಘೋಷಿಸಿದ್ದ ಆಸ್ಪತ್ರೆಯ ಲೈಸೆನ್ಸ್ ರದ್ದು
Update: 2017-12-08 19:13 IST
ಹೊಸದಿಲ್ಲಿ, ಡಿ.8: ಜೀವಂತ ಮಗುವೊಂದನ್ನು ‘ಮೃತ’ ಎಂದು ಘೋಷಿಸಿ ವಿವಾದಕ್ಕೀಡಾಗಿದ್ದ ಮ್ಯಾಕ್ಸ್ ಆಸ್ಪತ್ರೆಯ ಲೈಸೆನ್ಸನ್ನು ದಿಲ್ಲಿ ಸರಕಾರ ರದ್ದು ಮಾಡಿದೆ.
ಮೊದಲ ಮಗು ಹುಟ್ಟಿದಾಗಲೇ ಮೃತಪಟ್ಟಿದ್ದರೆ ಮತ್ತೊಂದು ಮಗು ಜೀವಂತವಿತ್ತು. ಆದರೆ ವೈದ್ಯರು ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದರು. ಅಂತ್ಯಕ್ರಿಯೆಗಾಗಿ ಮಗುವನ್ನು ತೆಗೆದುಕೊಂಡು ಹೋಗುತ್ತಿರುವಾಗ ಮಗು ಜೀವಂತ ಇರುವುದು ಪೋಷಕರ ಗಮನಕ್ಕೆ ಬಂದಿತ್ತು. ನಂತರ ಈ ಘಟನೆ ಭಾರೀ ವಿವಾದವನ್ನೇ ಸೃಷ್ಟಿಸಿತ್ತು,
ನಂತರ ಸರಕಾರದ ಮೂವರು ಸದಸ್ಯರ ಸಮಿರಿ ಈ ಬಗ್ಗೆ ವರದಿಯೊಂದನ್ನು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ರಿಗೆ ಸಲ್ಲಿಸಿದ್ದು, ಘಟನೆ ‘ಒಪ್ಪುವಂತಹದ್ದಲ್ಲ” ಎಂದವರು ಹೇಳಿದ್ದರು.
ಮುಂದಿನ ಆದೇಶದವರೆಗೆ ಆಸ್ಪತ್ರೆಯ ಲೈಸೆನ್ಸನ್ನು ರದ್ದುಗೊಳಿಸಲಾಗಿದೆ ಎಂದು ದಿಲ್ಲಿ ಸರಕಾರದ ಆರೋಗ್ಯ ಇಲಾಖೆಯ ಆರೋಗ್ಯ ಸೇವೆಗಳ ನಿರ್ದೇಶನಾಲಯ ತಿಳಿಸಿದೆ.