ಟ್ರಂಪ್ ತೊದಲು ಮಾತುಗಳನ್ನಾಡಿಲ್ಲ: ಶ್ವೇತಭವನ

Update: 2017-12-08 15:59 GMT

ವಾಶಿಂಗ್ಟನ್, ಡಿ. 8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೊದಲು ಮಾತುಗಳನ್ನಾಡುತ್ತಿದ್ದು, ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಊಹಾಪೋಹಗಳನ್ನು ಶ್ವೇತಭವನ ಶುಕ್ರವಾರ ತಳ್ಳಿಹಾಕಿದೆ.

ಮುಂದಿನ ವರ್ಷ ಅಧ್ಯಕ್ಷರು ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ ಹಾಗೂ ಬಳಿಕ ವೈದ್ಯರು ಅವರ ಆರೋಗ್ಯ ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿದರು.

ಬುಧವಾರ ಜೆರುಸಲೇಂನ ಸ್ಥಾನಮಾನದ ಬಗ್ಗೆ ಮಾಡಿದ ಮಹತ್ವದ ಭಾಷಣದ ಕೊನೆಯಲ್ಲಿ 71 ವರ್ಷದ ಟ್ರಂಪ್ ಅಸ್ಪಷ್ಟವಾಗಿ ಮಾತನಾಡಿದ್ದು, ಭಾರೀ ಊಹಾಪೋಹಗಳಿಗೆ ಕಾರಣವಾಗಿತ್ತು.

ಭಾಷಣದ ಕೊನೆಯಲ್ಲಿ ಅವರು ‘ಗಾಡ್ ಬ್ಲೆಸ್ ಅಮೆರಿಕ’ ಮುಂತಾದ ಪದಗಳನ್ನು ಅಸ್ಪಷ್ಟವಾಗಿ ಉಚ್ಚರಿಸಿದ್ದರು.

ಮುಂದಿನ ವರ್ಷದ ಆರಂಭದಲ್ಲಿ ಅವರು ನಿಗದಿತ ದೈಹಿಕ ತಪಾಸಣೆಗೆ ಒಳಗಾಗಲಿದ್ದಾರೆ. ಹೆಚ್ಚಿನ ಅಧ್ಯಕ್ಷರು ಈ ರೀತಿಯ ನಿಯಮಿತ ತಪಾಸಣೆಗೆ ಒಳಗಾಗುತ್ತಾರೆ.

ಟ್ರಂಪ್‌ರ ಆರೋಗ್ಯ ದಾಖಲೆಗಳನ್ನು ಬಿಡುಗಡೆ ಮಾಡಲು ಶ್ವೇತಭವನ ಒಪ್ಪಿಕೊಂಡಿರುವುದು ಇದೇ ಮೊದಲು. ಅವರಿಗಿಂತ ಮೊದಲಿನ ಅಧ್ಯಕ್ಷರು ನಿಯಮಿತವಾಗಿ ತಮ್ಮ ಆರೋಗ್ಯ ದಾಖಲೆಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News