ಯಮನ್: 6 ದಿನಗಳ ತೀವ್ರ ಸಂಘರ್ಷದಲ್ಲಿ 230 ಸಾವು

Update: 2017-12-08 16:02 GMT

ವಿಶ್ವಸಂಸ್ಥೆ, ಡಿ. 8: ಯಮನ್ ರಾಜಧಾನಿ ಸನಾದಲ್ಲಿ ಆರು ದಿನಗಳ ಕಾಲ ತೀವ್ರವಾಗಿ ನಡೆದ ಸಂಘರ್ಷ ಮುಕ್ತಾಯಗೊಂಡಿದೆ ಎಂದು ಸಂಘರ್ಷಪೀಡಿತ ದೇಶದಲ್ಲಿ ವಿಶ್ವಸಂಸ್ಥೆಯ ಮಾನವೀಯ ಸಮನ್ವಯಕಾರ ಜೇಮೀ ಮೆಕ್‌ಗಾಲ್ಡ್‌ರಿಕ್ ಗುರುವಾರ ಹೇಳಿದ್ದಾರೆ.

ಆರು ದಿನಗಳ ಭೀಕರ ಸಂಘರ್ಷದಲ್ಲಿ 230 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕೊನೆಯ ದಿನದಂದು ಯಾವುದೇ ವಾಯು ದಾಳಿ ಅಥವಾ ಯಾವುದೇ ರೀತಿಯ ಸೇನಾ ಚಟುವಟಿಕೆ ನಡೆದಿಲ್ಲ ಹಾಗೂ ಗಾಢ ಶಾಂತಿ ಸನಾಕ್ಕೆ ಮರಳಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿರುವ ಸುದ್ದಿಗಾರರಿಗೆ ಜೇಮೀ ಫೋನ್‌ನಲ್ಲಿ ಹೇಳಿದರು.

ಹಾಗಾಗಿ, ನಾಗರಿಕರು ಹೊರಗೆ ಹೋಗಿ ಅಗತ್ಯ ಪದಾರ್ಥಗಳು ಹಾಗೂ ನೆರವನ್ನು ಪಡೆದುಕೊಂಡರು. ಆದರೆ, ಕೆಲವರು ವಾಯು ದಾಳಿ ನಡೆಯಬಹುದೆಂದು ಹೆದರಿ ಮನೆಯಲ್ಲೇ ಉಳಿದುಕೊಂಡರು ಎಂದರು.

ವಿಶ್ವಸಂಸ್ಥೆಯ ತಂಡಗಳು, ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಮತ್ತು ಇತರ ನೆರವು ಗುಂಪುಗಳೂ ಸಣ್ಣ ಪ್ರಮಾಣದಲ್ಲಿ ಪರಿಸ್ಥಿತಿಯ ಬಗ್ಗೆ ಅಂದಾಜು ನಡೆಸಿವೆ ಎಂದು ಜೇಮೀ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News