ಸೋನಿಯಾ 71ನೇ ಹುಟ್ಟು ಹಬ್ಬ : ಶುಭ ಹಾರೈಸಿದ ಪ್ರಧಾನಿ

Update: 2017-12-09 13:15 GMT

ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ 71ನೇ ಹುಟ್ಟು ಹಬ್ಬದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.

ಟ್ವೀಟ್ ಒಂದನ್ನು ಮಾಡಿದ ಪ್ರಧಾನಿ ‘‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರಿಗೆ ದೀರ್ಘಾಯಸ್ಸು ಹಾಗೂ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ,’’ ಎಂದಿದ್ದಾರೆ.

ತರುವಾಯ ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸದೆದುರು ನೂರಾರು ಪಕ್ಷ ಕಾರ್ಯಕರ್ತರು ಹಾಗೂ ನಾಯಕರು ಹಾಜರಿದ್ದು ತಮ್ಮ ನೆಚ್ಚಿನ ನಾಯಕಿಯ ಹುಟ್ಟುಹಬ್ಬದಂದು ಅವರಿಗೆ ಶುಭ ಕೋರಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ತನ್ನ ಅಧಿನಾಯಕಿಗೆ ಶುಭಾಶಯ ಹೇಳಿದೆ.

ಸೋನಿಯಾ ಗಾಂಧಿ 1998ರಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News