ಇಂಧನ ಟ್ಯಾಂಕ್‌ಗಳನ್ನು ಬೀಳಿಸಿದ ಯುದ್ಧವಿಮಾನ: ಗ್ರಾಮಸ್ಥರಲ್ಲಿ ಆತಂಕ

Update: 2017-12-09 13:59 GMT

ಜೈಪುರ,ಡಿ.9: ಶುಕ್ರವಾರ ಬಸ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ನಯಿ ಕಾ ನಾಥ್ ಗ್ರಾಮದ ಬಳಿ ಪರ್ವತ ಪ್ರದೇಶದಲ್ಲಿ ಮಿಗ್-21 ಯುದ್ಧವಿಮಾನದಿಂದ ಮೂರು ಇಂಧನ ಟ್ಯಾಂಕ್‌ಗಳು ಕೆಳಕ್ಕೆ ಬಿದ್ದಿದ್ದು, ಇದು ಗ್ರಾಮಸ್ಥರಲ್ಲಿ ಭೀತಿಯನ್ನು ಸೃಷ್ಟಿಸಿತ್ತು.

ಭಾರೀ ಶಬ್ದವನ್ನು ಕೇಳಿದ್ದ ಗ್ರಾಮಸ್ಥರು ಬಾಂಬ್ ಸ್ಫೋಟವಾಗಿದೆ ಎಂದು ಭಾವಿಸಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಟ್ಯಾಂಕ್‌ಗಳನ್ನು ವಶಪಡಿಸಿಕೊಂಡು ಭಾರತೀಯ ವಾಯುಪಡೆ(ಐಎಎಫ್)ಗೆ ಮಾಹಿತಿ ನೀಡಿದ್ದರು.

ಈ ಇಂಧನ ಟ್ಯಾಂಕ್‌ಗಳನ್ನು ‘ಡ್ರಾಪ್ ಟ್ಯಾಂಕ್’ಎಂದು ಕರೆಯಲಾಗ್ತುದೆ. ಇವುಗಳನ್ನು ಬಳಸುವ ಯುದ್ಧ ವಿಮಾನಗಳು ಬಳಿಕ ಸುರಕ್ಷಿತ ಪ್ರದೇಶದಲ್ಲಿ ಅವುಗಳನ್ನು ಕೆಳಕ್ಕೆ ಹಾಕುತ್ತವೆ. ಜೈಪುರ ವಿಮಾನ ನಿಲ್ದಾಣದಲ್ಲಿ ದುರಸ್ತಿಯಲ್ಲಿದ್ದ ಈ ಮಿಗ್ ವಿಮಾನವನ್ನು ಶುಕ್ರವಾರ ಪರೀಕ್ಷಾರ್ಥ ಹಾರಾಟಕ್ಕೆ ತೊಡಗಿಸಲಾಗಿತ್ತು, ಆದರೆ ತಾಂತ್ರಿಕ ದೋಷ ಕಂಡು ಬಂದ ನಂತರ ಪೈಲಟ್ ಮುನ್ನೆಚ್ಚರಿಕೆ ಕ್ರಮವಾಗಿ ಈ ಟ್ಯಾಂಕ್‌ಗಳನ್ನು ಕೆಳಗೆ ಬೀಳಿಸಿ ಬಳಿಕ ಸಂಗನೇರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News