ಹೆತ್ತವರ ನೋಡಿಕೊಳ್ಳದ ಸರಕಾರಿ ಉದ್ಯೋಗಿಗಳ ಸಂಬಳಕ್ಕೆ ಕತ್ತರಿ!

Update: 2017-12-09 14:42 GMT

ಭೋಪಾಲ್, ಡಿ.9: ರಾಜ್ಯ ಸರಕಾರದ ಎಲ್ಲಾ ಉದ್ಯೋಗಿಗಳೂ ತಮ್ಮ ವೃದ್ಧ ತಂದೆತಾಯಿಗಳ ಯೋಗಕ್ಷೇಮದ ಬಗ್ಗೆ ಗಮನ ಹರಿಸಬೇಕು. ಹೀಗೆ ಮಾಡದ ಉದ್ಯೋಗಿಗಳ ಸಂಬಳದಿಂದ ಪ್ರತೀ ತಿಂಗಳು ಸ್ವಲ್ಪ ಮೊತ್ತವನ್ನು ಕಡಿತಗೊಳಿಸಿ, ಅವರ ಪೋಷಕರ ಹಿತಚಿಂತನೆಗೆ ಬಳಸಲು ಅವಕಾಶ ಮಾಡಿಕೊಡುವ ಕಾನೂನನ್ನು ಜಾರಿಗೊಳಿಸಲು ಮಧ್ಯಪ್ರದೇಶ ಸರಕಾರ ಚಿಂತನೆ ನಡೆಸಿದೆ.

ವೃದ್ಧ ತಂದೆತಾಯಿಗಳನ್ನು ಪರಿತ್ಯಜಿಸುವವರನ್ನು ಶಿಕ್ಷಿಸುವ ಕಾನೂನು ಈಗಾಗಲೇ ಜಾರಿಯಲ್ಲಿದೆ. ಆದರೆ ಈಗ ತಮ್ಮ ವೃದ್ಧ ಪೋಷಕರ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸರಕಾರಿ ಉದ್ಯೋಗಿಗಳ ಸಂಬಳದಿಂದ ಶೇ.10ರಷ್ಟು ಕಡಿತಗೊಳಿಸಿ, ಆ ಮೊತ್ತವನ್ನು ಅಂತಹ ಪೋಷಕರ ಹಿತಚಿಂತನೆಗೆ ಬಳಸಿಕೊಳ್ಳಲು ಅಧಿಕಾರ ನೀಡುವ ಕಾನೂನನ್ನು ಜಾರಿಗೊಳಿಸುವ ಉದ್ದೇಶವಿದೆ ಎಂದು ಮಧ್ಯಪ್ರದೇಶದ ಸಾಮಾಜಿಕ ನ್ಯಾಯ ಇಲಾಖೆಯ ಸಚಿವ ಗೋಪಾಲ್ ಭಾರ್ಗವ್ ತಿಳಿಸಿದ್ದಾರೆ.

    ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಹಿತಚಿಂತನೆ ಕಾಯ್ದೆಯನ್ನು 2007ರಲ್ಲಿ ಜಾರಿಗೆ ತರಲಾಗಿದ್ದು ಇದರಂತೆ ಪೋಷಕರು ಹಾಗೂ ಹಿರಿಯ ನಾಗರಿಕರು ತಮ್ಮ ಯೋಗಕ್ಷೇಮಕ್ಕೆ ಗರಿಷ್ಠ 10,000 ರೂ. ಮಾಸಿಕ ನಿರ್ವಹಣಾ ಮೊತ್ತ ಪಡೆಯುವ ಅವಕಾಶವಿದೆ. ಇದನ್ನು ಪಾಲಿದವರಿಗೆ 3 ತಿಂಗಳ ಜೈಲುಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News