ಶೇ.28 ಶ್ರೇಣಿಯ ಜಿಎಸ್‌ಟಿ ದರ ಪರಿಷ್ಕರಣೆ: ಕೇಂದ್ರದ ಸುಳಿವು

Update: 2017-12-09 17:45 GMT

ಮುಂಬೈ, ಡಿ.9: ಕಳೆದ ತಿಂಗಳು ಸುಮಾರು 200ಕ್ಕೂ ಹೆಚ್ಚಿನ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆಗೊಳಿಸಿದ ಬಳಿಕ, ಇದೀಗ ಶೇ.28ರ ಶ್ರೇಣಿಯಲ್ಲಿರುವ ವಸ್ತುಗಳ ಜಿಎಸ್‌ಟಿ ದರವನ್ನು ಪರಿಷ್ಕರಿಸುವ ಬಗ್ಗೆ ಕೇಂದ್ರ ಸರಕಾರ ಸುಳಿವು ನೀಡಿದೆ.

 ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‌ಟಿ ಸಮಿತಿಯು ನವೆಂಬರ್ 10ರಂದು 200ಕ್ಕೂ ಹೆಚ್ಚಿನ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆಗೊಳಿಸಿತ್ತು. ಶೇ.28ರ ತೆರಿಗೆ ಶ್ರೇಣಿಯಲ್ಲಿದ್ದ 178ಕ್ಕೂ ಹೆಚ್ಚಿನ ವಸ್ತುಗಳನ್ನು ಶೇ.18ರ ತೆರಿಗೆ ಶ್ರೇಣಿಗೆ ಒಳಪಡಿಸಲಾಗಿದ್ದರೆ, ಎ.ಸಿ. ಮತ್ತು ಎ.ಸಿ.ರಹಿತ ರೆಸ್ಟಾರೆಂಟ್‌ಗಳ ಜಿಎಸ್‌ಟಿ ದರವನ್ನು ಶೇ.5ರ ಏಕರೀತಿಯ ಜಿಎಸ್‌ಟಿ ದರಕ್ಕೆ ನಿಗದಿಗೊಳಿಸಲಾಗಿತ್ತು. ಇದೀಗ ಶೇ.28ರ ಜಿಎಸ್‌ಟಿ ಶ್ರೇಣಿಯನ್ನು ಪರಿಷ್ಕರಿಸುವ ಸಾಧ್ಯತೆಯಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಈ ಹಿಂದೆ ಶೇ.28ರ ಜಿಎಸ್‌ಟಿ ಶ್ರೇಣಿಯಲ್ಲಿ 228 ವಸ್ತುಗಳಿದ್ದರೆ ಬಳಿಕ ಇದನ್ನು ಪರಿಷ್ಕರಿಸಿ ಕೇವಲ 50 ವಸ್ತುಗಳಿಗೆ ಶೇ.28ರ ಜಿಎಸ್‌ಟಿ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News