ಬೋಳಾರರು ಗುರುಕಾರುಣ್ಯಕ್ಕೊಳಗಾದ ಕಲಾವಿದ: ಶ್ರೀ ಗುರುದೇವಾನಂದ ಸ್ವಾಮೀಜಿ

Update: 2017-12-09 18:32 GMT

ಮಂಗಳೂರು, ಡಿ. 9: ಯಕ್ಷಗಾನದ ಮೇರು ಕಲಾವಿದರಾದ ಬೋಳಾರ ನಾರಾಯಣ ಶೆಟ್ಟರು ಜೀವನದ ಕೊನೆಯ ಹಂತದಲ್ಲಿ ಗುರುಕಾರುಣ್ಯಕ್ಕೆ ಒಳಗಾದವರು. ಮುಂಬೈಯಲ್ಲಿ ನಿತ್ಯಾನಂದ ಸ್ವಾಮಿಯವರನ್ನು ಭೇಟಿಯಾದ ಬಳಿಕ ಅವರ ಭಜಕರಾಗಿ ಪರಿವರ್ತನೆಗೊಂಡ ಅವರು ಮಂಗಳೂರಿನ ತಮ್ಮ ನಿವಾಸಕ್ಕೆ ನಿತ್ಯಾನಂದ ನಿಲಯ ಎಂದು ಹೆಸರಿಟ್ಟುಕೊಂಡರುೞ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಸಂಸ್ಥಾನದಲ್ಲಿ ನಡೆದ ಶ್ರೀ ದತ್ತಮಹಾಯಾಗ ಸಂದರ್ಭ, ಮಂಗಳೂರಿನ ದಿ. ಬೋಳಾರ ನಾರಾಯಣ ಶೆಟ್ಟಿ ಯಕ್ಷ ಪ್ರತಿಷ್ಠಾನ ವತಿಯಿಂದ ಏರ್ಪಡಿಸಲಾಗಿದ್ದ ಱಬೋಳಾರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನೞ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ 2016-17ನೇ ಸಾಲಿನ ಱಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿೞ ಪ್ರದಾನ ಮಾಡಿ ಅವರು ಆರ್ಶೀರ್ವಚನ ನೀಡಿದರು. ದಿ. ನಾರಾಯಣ ಶೆಟ್ಟರು ನಿತ್ಯಾನಂದ ಮೊರೆ ಹೋದರೆ ಅವರ ಪುತ್ರ ಕರುಣಾಕರ ಶೆಟ್ಟರು ದೇವಾನಂದರ ಬಳಿಯಿದ್ದಾರೆ. ಎಂದವರು ನುಡಿದರು.

ಯಕ್ಷಗಾನ ಅರ್ಥಧಾರಿ ಮತ್ತು ವಿಶ್ವಸ್ಥ ಮಂಡಳಿ ಸದಸ್ಯ ಪ್ರೊ. ಭಾಸ್ಕ್ರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿ ಱಅರುವ ಕೊರಗಪ್ಪ ಶೆಟ್ಟರು ಬೋಳಾರರೊಂದಿಗೆ ದೀರ್ಘ ಒಡನಾಟವಿದ್ದವರು. ಪೌರಾಣಿಕ ಮತ್ತು ತುಳು ಪ್ರಸಂಗಗಳಲ್ಲಿ ವಿಶಿಷ್ಠ ಶೈಲಿಯ ಪಾತ್ರ ನಿರ್ವಹಣೆಯಿಂದ ಅಭಿಮಾನಿಗಳ ಮನಗೆದ್ದಿರುವ ಅರುವ 77 ವಯಸ್ಸಿನಲ್ಲಿಯೂ ಚಿರಯುವಕನಂತೆ ರಂಗದಲ್ಲಿ ಮೆರೆಯುತ್ತಿರುವ ಯಕ್ಷತಾರೆೞ ಎಂದು ಸನ್ಮಾನಿತರ ಕಲಾಜೀವನದ ವಿವರ ನೀಡಿದರು. ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶುಭಾಶಂಸನೆ ಗೈದರು. ಅರುವ ಕೊರಗಪ್ಪ ಶೆಟ್ಟರು ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದರು.

ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ ಡಿ. ಲೋಕಅದಾಲತ್ ಖಾಯಂ ಸದಸ್ಯ ಬಾಲಕೃಷ್ಣ ಶೆಟ್ಟಿ, ನವಿಮುಂಬೈ ಫಾರ್ಮಾಸಿಟಿಕಲ್ ಡಿಸ್ಟ್ರೀಬೂಟರ್ ಎನ್. ಡಿ. ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಮುಖ್ಯ ಅತಿಥಿಗಳಾಗಿದ್ದರು. ಬೋಳಾರ ಪ್ರತಿಷ್ಠಾನದ ಸಂಚಾಲಕ ಬೋಳಾರ ಕರುಣಾಕರ ಶೆಟ್ಟಿ, ಗೀತಾ ಕರುಣಾಕರ ಶೆಟ್ಟಿ ಮತ್ತು ಮಕ್ಕಳು ವಿಶ್ವಸ್ಥ ಮಂಡಳಿ ಸದಸ್ಯ ವಾಸುದೇವ ಆರ್. ಕೊಟ್ಟಾರಿ ಉಪಸ್ಥಿತರಿದ್ದರು.

ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ಓದಿದರು. ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ. ಮಹತೇಶ್ ಭಂಡಾರಿ ವಂದಿಸಿದರು. ಸಮಾರಂಭದ ಅಂಗವಾಗಿ ರಾತ್ರಿ ಹನುಮಗಿರಿ ಮೇಳದವರಿಂದ ತಾರಾನಾಥ ವರ್ಕಾಡಿ ವಿರಚಿತ ‘ಒಡಿಯೂರು ಕ್ಷೇತ್ರ ಮಹಾತ್ಮೆ’ ಬಯಲಾಟ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News