ತೊಕ್ಕೊಟ್ಟಿನಲ್ಲಿ ಹಾಜಿ ಗೋಲ್ಡ್ ಆಭರಣ ಮಳಿಗೆ ಉದ್ಘಾಟನೆ

Update: 2017-12-10 09:13 GMT

ಮಂಗಳೂರು, ಡಿ.10: ತೊಕ್ಕೊಟ್ಟು ಎಮ್‌ಜೆಎಸ್ ವಾಣಿಜ್ಯ ಸಂಕೀರ್ಣದಲ್ಲಿ ಚಿನ್ನ, ವಜ್ರ, ಪ್ಲಾಟಿನಂ ಹಾಗೂ ಮುತ್ತುಗಳ 'ಹಾಜಿ ಗೋಲ್ಡ್' ಅಭರಣ ಮಳಿಗೆಯನ್ನು ಕರ್ನಾಟಕ ಅಭರಣ ತಯಾರಕರ ಒಕ್ಕೂಟದ ಅಧ್ಯಕ್ಷ ಹಾಗೂ ಉಡುಪಿಯ ನೊವಲ್ಟಿ ಆಭರಣ ಮಳಿಗೆಯ ಮಾಲಕ ಜಯ ಆಚಾರ್ಯ ರವಿವಾರ ಉದ್ಘಾಟಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸದರ್ ಬಝಾರ್‌ನ ಮಾಲಕ ಹಾಜಿ ಅಹ್ಮದ್ ಬಾವ, ಕಾರ್ಪೋರೇಶನ್ ಬ್ಯಾಂಕ್ ತೊಕ್ಕೊಟ್ಟು ಶಾಖೆಯ ವ್ಯವಸ್ಥಾಪಕ ಕೇಶವ ಜೈನ್, ಉಳ್ಳಾಲ ಪುರಸಭೆಯ ಸದಸ್ಯ ಯು.ಎ.ಇಸ್ಮಾಯೀಲ್ ಶುಭ ಹಾರೈಸಿದರು.

ಸಮಾರಂಭದಲ್ಲಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ದುಆ ನೆರವೇರಿಸಿದರು. ಹಾಜಿ ಗೋಲ್ಡ್ ಸಂಸ್ಥೆಯ ಆಡಳಿತ ನಿರ್ದೇಶಕ ಮುಹಮ್ಮದ್ ಶಹಾಬುದ್ದೀನ್ ಸ್ವಾಗತಿಸುತ್ತಾ, ಬೆಳೆಯುತ್ತಿರುವ ನಗರ ಪ್ರದೇಶವಾದ ತೊಕ್ಕೊಟ್ಟು ಪರಿಸರದಲ್ಲಿ ಪ್ರಥಮ ಬಾರಿಗೆ 916 ಹಾಲ್ ಮಾರ್ಕಿನ ಗುಣಮಟ್ಟದ ಚಿನ್ನಾಭರಣ ದೊಂದಿಗೆ ವಜ್ರ, ಪ್ಲಾಟಿನಂ ಆಭರಣವನ್ನು ಜನರಿಗೆ ಪರಿಚಯಿಸಲಾಗುತ್ತಿದೆ. ಜೊತೆಗೆ ಚಿನ್ನದ ಲೇಪನಗಳನ್ನೊಳಗೊಂಡ ನವರತ್ನಗಳು, ಮತ್ತುಗಳನ್ನು ಅಳವಡಿಸಲಾದ ಐಷಾರಾಮಿ ಮೊಬೈಲ್‌ಗಳನ್ನು ಹೊಂದಿರುವುದು ಸಂಸ್ಥೆಯ ವಿಶೇಷತೆಯಾಗಿದೆ ಎಂದು ತಿಳಿಸಿದರು.

ಆಭರಣಗಳ ತಯಾರಿಯಲ್ಲಿ ಒಂದು ಕಲಾತ್ಮಕತೆ ಇದೆ. ಜೊತೆಗೆ ಗ್ರಾಹಕರ ಸಂತೃಪ್ತಿ ಮುಖ್ಯ. ಈ ನಿಟ್ಟಿನಲ್ಲಿ ಹಾಜಿ ಗೋಲ್ಡ್ ಹೆಚ್ಚಿನ ಗಮನ ಹರಿಸುತ್ತಿದೆ ಎಂದ ಶಹಾಬುದ್ದೀನ್ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಫಲ್ಹಾಹ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯು.ಬಿ.ಮುಹಮ್ಮದ್ ಉಚ್ಚಿಲ್, ಖಜಾಂಜಿ ಕೆ.ಪಿ.ಇಸ್ಮಾಯೀಲ್ ನಾಗತೋಟ, ಅಳೇಕಲ ಸೈಯದ್ ಮದನಿ ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿಯ ಉಪಾಧ್ಯಕ್ಷ ಯು. ಇಬ್ರಾಹೀಂ ಖಾಸಿಂ, ಎಮ್‌ಜೆಎಸ್ ವಾಣಿಜ್ಯ ಸಂಕೀರ್ಣದ ಮಾಲಕ ಮುಹಮ್ಮದ್ ಹನೀಫ್, ಹಿಂದೂಸ್ಥಾನ್ ಬಾವ ಬಿಲ್ಡರ್ಸ್‌ ಸಂಸ್ಥೆಯ ಪ್ರವರ್ತಕ ಇಬ್ರಾಹೀಂ, ಹಾಜಿ ಗೋಲ್ಡ್ ಸಂಸ್ಥೆಯ ಪಾಲುದಾರರಾದ ಅಹ್ಮದ್ ಬಾವ, ಮುಹಮ್ಮದ್ ಶುಹೈಬ್, ತೌಸಿಫ್ ಅಹ್ಮದ್ ಶೇಖ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಥಮ ಗ್ರಾಹಕರಾಗಿ ಫಾತಿಮಾ ಬಿ. ತಲಪಾಡಿ ಆಭರಣ ಖರೀದಿಸಿದರು. ಶಾಹಿಲ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ  ಗ್ರಾಹಕರಿಗೆ ಲಕ್ಕಿ ಕೂಪನ್ ಗೆಲ್ಲುವ ಅವಕಾಶವನ್ನು ನೀಡಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News