ಮುಲ್ಕಿ- ಹೆಜಮಾಡಿ ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ

Update: 2017-12-10 12:10 GMT

ಮಂಗಳೂರು, ಡಿ.10: ಸರ್ಫಿಂಗ್ ಸ್ವಾಮಿ ಫೌಂಡೇಶನ್ ವತಿಯಿಂದ ಮುಲ್ಕಿ- ಹೆಜಮಾಡಿಯ ಬೀಚ್‌ನ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಇಂದು ನಡೆಯಿತು.

ಮಂತ್ರ ಸರ್ಫ್ ಕ್ಲಬ್‌ನ 50ಕ್ಕೂ ಅಧಿಕ ಸದಸ್ಯರು ಮುಲ್ಕಿ- ಹೆಜಮಾಡಿಯ ಸರ್ಫಿಂಗ್ ಪಾಯಿಂಟ್ ಬಳಿ ಸೇರಿ ಬೀಚ್‌ನ ಸುತ್ತಮುತ್ತ ಎಸೆಯಲಾಗಿದ್ದ ಕಸಕಡ್ಡಿ, ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಬೀಚ್ ಸ್ವಚ್ಛಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News