ದೇಶದ 20 ಹೈಕೋರ್ಟ್‌ಗಳಲ್ಲಿ 6 ಲಕ್ಷ ಪ್ರಕರಣ ಬಾಕಿ !

Update: 2017-12-10 14:01 GMT

ಹೊಸದಿಲ್ಲಿ, ಡಿ.10: ದೇಶದ 20 ಹೈಕೋರ್ಟ್‌ಗಳಲ್ಲಿ ಸುಮಾರು 6 ಲಕ್ಷ ಪ್ರಕರಣಗಳು ಕಳೆದೊಂದು ದಶಕದಿಂದ ವಿಚಾರಣೆಗೆ ಬಾಕಿಯಿದೆ ಎಂದು ವರದಿಯೊಂದು ತಿಳಿಸಿದೆ.

 2016ರ ಡಿ.31ರಂದು ಅನ್ವಯಿಸುವಂತೆ ದೇಶದ 24 ಹೈಕೋರ್ಟ್‌ಗಳಲ್ಲಿ ಒಟ್ಟು 40.15 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು , ಇದರಲ್ಲಿ ಶೇ.19.45ರಷ್ಟು (5,97,650)ಪ್ರಕರಣಗಳು ಒಂದು ದಶಕಕ್ಕೂ ಹಿಂದಿನ ಪ್ರಕರಣಗಳಾಗಿವೆ ಎಂದು ರಾಷ್ಟ್ರೀಯ ನ್ಯಾಯಿಕ ದತ್ತಾಂಶ ಜಾಲದ ಅಂಕಿಅಂಶಗಳಿಂದ ತಿಳಿದು ಬಂದಿದೆ. ದೇಶದಲ್ಲಿರುವ 24 ಹೈಕೋರ್ಟ್‌ಗಳಲ್ಲಿ ಅಲ್ಲಹಾಬಾದ್ ಹೈಕೋರ್ಟ್‌ನ ಅಂಕಿಅಂಶ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

 ಬಾಂಬೆ ಹೈಕೋರ್ಟ್‌ನಲ್ಲಿ 1,29,063 ಪ್ರಕರಣ ಬಾಕಿಯಿದ್ದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ 96,596 ಸಿವಿಲ್ ಕೇಸ್‌ಗಳಾಗಿದ್ದರೆ, 12,846 ಕ್ರಿಮಿನಲ್ ಪ್ರಕರಣ ಹಾಗೂ 19,621 ತಡೆಯಾಜ್ಞೆ ಪ್ರಕರಣಗಳಾಗಿವೆ. ದ್ವಿತೀಯ ಸ್ಥಾನದಲ್ಲಿರುವ ಪಂಜಾಬ್ ಮತ್ತಯ ಹರ್ಯಾಣ ಹೈಕೋರ್ಟ್‌ನಲ್ಲಿ 99,625 ಪ್ರಕರಣ ಬಾಕಿಯಿದ್ದು, ಇದರಲ್ಲಿ ಸಿವಿಲ್ 64,967, ಕ್ರಿಮಿನಲ್ 13,324 ಹಾಗೂ ರಿಟ್ ಅರ್ಜಿ 21,334 . ಕೋಲ್ಕತಾ ಹೈಕೋರ್ಟ್‌ನಲ್ಲಿ 74,315 ಪ್ರಕರಣ ಬಾಕಿಯಿದ್ದು ಇದರಲ್ಲಿ ಸಿವಿಲ್ 40,529, ಕ್ರಿಮಿನಲ್ 14,898 ಮತ್ತು ರಿಟ್ 1,888.

 2014ರ ಅಂತ್ಯದ ವೇಳೆ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 41.52 ಲಕ್ಷ ಆಗಿದ್ದರೆ, 2015ರ ಡಿಸೆಂಬರ್ ವೇಳೆಗೆ ಸ್ವಲ್ಪ ಇಳಿಕೆಯಾಗಿ 38.70 ಲಕ್ಷ ಕ್ಕೆ ತಲುಪಿದೆ. ಆದರೆ 2016ರ ಅಂತ್ಯಕ್ಕೆ ಮತ್ತೆ ಏರಿಕೆಯಾಗಿ 40.15 ಲಕ್ಷಕ್ಕೆ ತಲುಪಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News