‘ಹಲವು ಧರ್ಮಗಳು- ಒಂದು ಭಾರತ’ ಸೌಹಾರ್ದ ಮ್ಯಾರಥಾನ್

Update: 2017-12-11 14:58 GMT

ಉಡುಪಿ, ಡಿ.11: ಎಸ್‌ಐಒ ಹೂಡೆ ಘಟಕದ ವತಿಯಿಂದ ‘ಹಲವು ಧರ್ಮಗಳು - ಒಂದು ಭಾರತ’ ಅಭಿಯಾನದ ಪ್ರಯುಕ್ತ ರವಿವಾರ ಹೂಡೆ ಸಿಂಡಿಕೇಟ್ ಬ್ಯಾಂಕ್‌ನಿಂದ ಗುಜ್ಜರಬೆಟ್ಟುವರೆಗೆ ಸೌಹಾರ್ದ ಮ್ಯಾರಥಾನ್‌ನ್ನು ಹಮ್ಮಿಕೊಳ್ಳಲಾಗಿತ್ತು.

ಎಸ್‌ಐಒ ರಾಜ್ಯ ಕಾರ್ಯದರ್ಶಿ ದಾನೀಶ್ ಮ್ಯಾರಥಾನ್‌ಗೆ ಚಾಲನೆ ನೀಡಿ ದರು. ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಬ್ದುಲ್ ಕಾದೀರ್ ಮೊಯಿದ್ದೀನ್, ಪ್ರೊ.ಅಬ್ದುಲ್ ಅಝೀಜ್, ಫಹೀಮ್ ಹೂಡೆ, ಶುಐಬ್ ಮಲ್ಪೆಉಪಸ್ಥಿತರಿದ್ದರು.

ಸಾರ್ವಜನಿಕ ಸಭೆ: ‘ಹಲವು ಧರ್ಮಗಳು- ಒಂದು ಭಾರತ’ ಶೀರ್ಷಿಕೆ ಯಡಿಯಲ್ಲಿ ಸಾರ್ವಜನಿಕ ಸಭೆಯನ್ನು ಕೆಮ್ಮಣ್ಣುವಿನ ಲಿಟಲ್ ಫ್ಲವರ್ ಹಾಲಿನಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಧರ್ಮಗುರು ಫಾ.ವಿಲಿಯಮ್ ಮಾರ್ಟಿಸ್, ಮೊಗವೀರ ಮಹಾಸಂಘ ಹೂಡೆ ಘಟಕಾಧ್ಯಕ್ಷ ವೆಂಕಟೇಶ್ ಕುಂದರ್, ದಸಂಸ ಮುಖಂಡ ಪರಮೇಶ್ವರ್ ಉಪ್ಪೂರು, ಅಬ್ದುಲ್ ಕಾದೀರ್ ಮೊಯ್ದಿನ್, ಶುಐಬ್ ಮಲ್ಪೆ, ದಾನೀಶ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮ್ಯಾರಥಾನ್ ಓಟದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಫಹೀಮ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News